ಚಳ್ಳಕೆರೆ :
ಹೊಸದುರ್ಗದಲ್ಲಿ ಜಲಾವೃತವಾದ ಜಮೀನುಗಳು
ಹೊಸದುರ್ಗದಲ್ಲಿ ಸತತ ಮಳೆಯಿಂದಾಗಿ ಜಮೀನುಗಳಿಗೆ ನೀರು
ನುಗ್ಗಿದ್ದು, ಜಮೀನುಗಳಲ್ಲಿ ಸಂಪೂರ್ಣವಾಗಿ ಬೆಳೆದು ನಿಂತಿದ್ದ
ಬೆಳೆ ಜಲಾವೃತವಾಗಿದೆ.
ರಾಗಿ, ಆರ್ಕ, ಸಾವೆ, ಸಜ್ಜೆ ಬೆಳೆಯಿರುವ
ಜಮೀನುಗಳು ಬಹುತೇಕ ನೀರಿನಿಂದ ತುಂಬಿದ್ದು, ರೈತರಿಗೆ
ತುಂಬಲಾರದ ನಷ್ಟವಾಗಿದೆ.
ಮಳೆಯಿಂದಾಗಿ ಬೆಳೆ ನಷ್ಟವಾಗಿರುವ
ರೈತರಿಗೆ ಪರಿಹಾರ ನೀಡಬೇಕು. ಬೆಳೆ ವಿಮೆಯನ್ನು ಮಾಡಿಸಿದ್ದು,
ವಿಮೆಯ ಹಣವನ್ನು ಕೊಡಬೇಕೆಂದು ರೈತ ಸಂಘದವರು
ಆಗ್ರಹಿಸಿದ್ದಾರೆ.