ಚಳ್ಳಕೆರೆ :
ಚೀರನಹಳ್ಳಿಯಲ್ಲಿ ಚಿರತೆ ಹಾವಳಿ ತಪ್ಪಿಸಿ
ಹೊಳಲ್ಕೆರೆಯ ಚೀರನಹಳ್ಳಿ ರಸ್ತೆಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು,
ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತ ಸಂಘದ ಸದಸ್ಯರು
ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಚೀರನಹಳ್ಳಿ ರಸ್ತೆಯ
ಪಕ್ಕದಲ್ಲಿರುವ, ಹಿಂದೂ ಹಾಗೂ ವೀರಶೈವ ರುದ್ರಭೂಮಿ
ಪ್ರದೇಶದಲ್ಲಿ ಚಿರತೆಗಳು ಮೇಕೆ ಮೇಲೆ ದಾಳಿ ಮಾಡಿಕೊಂದಿತ್ತು.
ಇದೇ ಜಾಗದಲ್ಲಿ ಕಂಬದ ದೇವರಹಟ್ಟಿ ಯೋಗೇಶ್ ಎಂಬ ಕುರಿ
ಗಾಹಿ, ಕುರಿ ಮೇಯಿಸುವಾಗ ಚಿರತೆ ಕುರಿ ಹಿಂಡಿನ ಮೇಲೆ ದಾಳಿ
ನಡೆಸಿ ಕೊಂದು ರಕ್ತ ಹೀರಿತ್ತು ಎಂದರು.