ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಸೆಪ್ಟಂಬರ್ 3 ರಂದು ನಡೆಯುವ ಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆಯ ಪೂರ್ವ ಸಿದ್ಧತೆ ಯನ್ನು ಕಾರ್ಯನಿರ್ವಾಹಕ ಅಧಿಕಾರಿಯದ ಶಶಿಧರ್ ರವರು ಭೇಟಿ ನೀಡಿ ಜಾತ್ರೆಗೆ ಬೇಕಾಗುವಂತಹ ಮುಂಜಾಗ್ರತಾ ಕೆಲಸ ಕಾರ್ಯಗಳನ್ನು ಮಾಡುವಂತೆ ಸೂಚಿಸಿ ಗ್ರಾಮ ಪಂಚಾಯಿತಿಯಿಂದ ನಡೆಯುವಂತಹ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಗುಣಮಟ್ಟ ಕಾಮಗಾರಿಗಳನ್ನು ಮಾಡಿ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಳುಹಿಸಿ ಎಂದು ಸೂಚಿಸಿದರು
ಈ ಸಂದರ್ಭದಲ್ಲಿ ತಾಲೂಕಪಂಚಾಯತಿ ಸಿಬ್ಬಂದಿಯಾದ ಪ್ರವೀಣ್, ಪ್ರಶಾಂತ್, ಮತ್ತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಹನುಮಂತರಾಯ, ಮತ್ತು ಅಧ್ಯಕ್ಷರಾದ ಎಂ ಓಬಣ್ಣ, ಗ್ರಾಮ ಪಂಚಾಯತಿ ಸದಸ್ಯರಾದ ಟಿ ಶಶಿಕುಮಾರ್ ,ಬೊಮ್ಮಣ್ಣ ಜಿಎಂ, ಈರಣ್ಣ, ಸಿಬ್ಬಂದಿಗಳಾದ ಪ್ರಕಾಶ್, ಮತ್ತು ರಾಜಣ್ಣ , ಊರಿನ ಮುಖಂಡರಾದ ಬಾಬು, ನಾಗರಾಜ್ ,ಬೊಮ್ಮಣ್ಣ, ಮಾರಣ್ಣ , ಉಪಸ್ಥಿತರಿದ್ದರು