ಚಳ್ಳಕೆರೆ : ನಗರದ ಗಾಂಧಿನಗರ ಪಾರ್ಕ್ ನ ಆವರಣದಲ್ಲಿರುವ ಶ್ರೀಸಾಯಿ ಬಾಬಾ ಪ್ರಶಾಂತ ನಿಲಯ,
ಹೊಯ್ಸಳ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಗುರುವಾರ ಸಂಜೆ ಶ್ರಾವಣ ಮಾಸದ ಪ್ರಯುಕ್ತ ಚಳ್ಳಕೆರೆಯ ಶ್ರೀ ಶಾರದಾಶ್ರಮದ ಅಂಗಸಂಸ್ಥೆಯಾದ “ಶ್ರೀ ಶಾರದಾದೇವಿ ಸತ್ಸಂಗ ಕೇಂದ್ರ”ದ ಸದ್ಭಕ್ತರು ವಿಶೇಷ ಭಜನೆಯನ್ನು ನಡೆಸಿಕೊಟ್ಟರು .
ಈ ವಿಶೇಷ ಭಜನಾ ಸಂಕೀರ್ತನೆಯಲ್ಲಿ ಶ್ರೀಸಾಯಿ ಬಾಬಾ ಮಂದಿರದ ಪ್ರಧಾನ ಅರ್ಚಕರಾದ ವೀರೇಶ್ ಶಾಸ್ತ್ರೀಜಿ, ಶ್ರೀಶಾರದಾಶ್ರಮದ ಸದ್ಭಕ್ತರಾದ ವಿಶಾಲಾಕ್ಷಿ ಪುಟ್ಟಣ್ಣ, ಮಾಣಿಕ್ಯ ಸತ್ಯನಾರಾಯಣ, ಗಿರಿಜಾ,ಗೀತಾ ವೆಂಕಟೇಶ್, ಸುಜಾತ ಬಸವರಾಜ್, ಗಂಗಾಂಬಿಕೆ ರವಿ, ಯತೀಶ್ ಎಂ ಸಿದ್ದಾಪುರ, ಗಿರಿಜಾಮ್ಮ,ವನಜಾಕ್ಷಿ ಮೋಹನ್ ,ತಿಪ್ಪಮ್ಮ, ಮೋಹಿನಿ,ಕಲ್ಪನ ಮಧುಸೂದನ್,ಆಶಾ ನಾಗರಾಜ್,ಕವಿತ, ವೀಣಾ,ಪಂಕಜ, ನಾಗರತ್ನಮ್ಮ, ಶಾರದಾಮ್ಮ,ಉಷಾ ಶ್ರೀನಿವಾಸಲು, ಮುಂತಾದ ಶ್ರೀಶಾರದಾಶ್ರಮದ ಸದ್ಭಕ್ತರು ಹಾಗೂ ಶ್ರೀಸಾಯಿ ಬಾಬಾ ಮಂದಿರದ ಸದ್ಭಕ್ತರು ಪಾಲ್ಗೊಂಡಿದ್ದರು.