ಚಳ್ಳಕೆರೆ :
ರೈತರ ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ನಂಬರ್ ಜೋಡಣೆ ಮಾಡುತ್ತಿರುವುದನ್ನು ವಿರೋಧಿಸಿ ಸೆಪ್ಟೆಂಬರ್ 6 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿವೀರಣ್ಣ ಹೇಳಿದ್ದಾರೆ.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ತಾಲೂಕಿನ ಎಲ್ಲಾ ರೈತರ ಸಮ್ಮುಖದಲ್ಲಿ ಪೂರ್ವ ಭಾವಿ ಸಭೆ ಕರೆದು ಪ್ರತಿಭಟನೆಗೆ ಸಜ್ಜುಗೊಳಿಸಿದ್ದಾರೆ.
ವಿದ್ಯುತ್ ಕಛೇರಿ ಮುಂದೆ ಪ್ರತಿಭಟನೆ ಮಾಡುವ ಬಗ್ಗೆ ಹಾಗೂ ರೈತರ ಬೆಳೆಗಳಿಗೆ ಸ್ವಾಮಿನಾಥನ್ ವರದಿಯಂತೆ ಕಾನೂನಾತ್ಮಕವಾಗಿ ಬೆಂಬಲ ಬೆಲೆ ಘೋಷಣೆ ಮಾಡಲು ಸರ್ಕಾರಗಳಿಗೆ ಎಚ್ಚರ ಕೊಡುವ ಕುರಿತು ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡದಿರುವ,
ಸರ್ಕಾರಗಳಿಗೆ ಎಚ್ಚೆರಿಕೆ ಕೊಡುವ ಮೂಲಕ ರೈತರ ಹೊಟ್ಟೆಮೇಲೆ ಹೊಡಿಯುವ ಸರಕಾರಕ್ಕೆ ಬುದ್ದಿ ಕಲಿಸಬೇಕು ಎಂದು ಸಭೆಯಲ್ಲಿ ಕಿಡಿಕಾರಿದ್ದಾರೆ.
ಅಂದು ಸೆ.6 ರಂದು ಸುಮಾರು 300 ರಿಂದ400 ರೈತರು ನಗರದ ಬಳ್ಳಾರಿ ರಸ್ತೆಯ ಚಳ್ಳಕೆರೆಮ್ಮ ದೇವಸ್ಥಾನದಿಂದ ನೆಹರು ವೃತ್ತ ಹಾಗೂ ಅಂಬೇಡ್ಕರ್ ವೃತ್ತದ ಮೂಲಕ ಬೆಸ್ಕಾಂ ಕಛೇರಿಗೆ ಪ್ರತಿಭಟನೆ ಮೂಲಕ ಘೋಷಣೆಗಳನ್ನು ಕೂಗುತ್ತಾ ಸರ್ಕಾರದ ದ್ವಂದ್ವ ನಿಲುವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಲಾಗುವುದು ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ತಾಲೂಕಿನ ರೈತ ಮುಖಂಡರು ,ಪದಾಧಿಕಾರಿಗಳು ರೈತರು ಹಾಜರಿದ್ದರು.