ಚಳ್ಳಕೆರೆ : ಚಳ್ಳಕೆರೆ ತಾಲೂಕಿನಲ್ಲಿ ಸರಣಿ ಕಳ್ಳತನ
ಮನೆ ಬೀಗ ಮುರಿದು ಖದೀಮರು ಮನೆಗಳ್ಳತನ
ಮಾಡಿರುವ ಘಟನೆ ನಡೆದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸಾಣೀಕೆರೆ ಗ್ರಾಮದಲ್ಲಿ ಬುಧವಾರ
ತಡರಾತ್ರಿ ಶಿವಕುಮಾರ್ ಮನೆಯ ಮುಖ್ಯದ್ವಾರದ ಬಾಗಿಲು ಹೊಡೆದು15
ಸಾವಿರ ರೂ ಹಾಗೂ 15 ಸಾವಿರ ರೂ ಮೌಲ್ಯದ 250 ಗ್ರಾಂ ಚಿನ್ನ
ದೋಚಿದ್ದಾರೆ.
ಇನ್ನೂ ನರಸಿಂಹಮೂರ್ತಿ ಮನೆಯ ಹಿಂಬಾಗಿಲು ಹೊಡೆದು 38ಗ್ರಾಂ ಚಿನ್ನ12 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಬೆರಳಚ್ಚು ತಜ್ಞರು ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ
ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗೆ ಕಳ್ಳತನ ಪ್ರಕರಣಗಳು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ
ಹಳ್ಳಿ, ಪ್ರದೇಶದಲ್ಲಿ ಕಳ್ಳತನ ಮಾಡುತ್ತಿರುವುದು ಹೆಚ್ಚಾಗಿದ್ದು
ಹೆದ್ದಾರಿಗೆ ಕೊಂಡಿರುವ ನಾಗರೀಕರನ್ನು ಚೆಚ್ಚಿ ಬೀಳಿಸುವಂತೆ
ಮಾಡಿದ್ದು ಪೋಲಿಸ್ ಇಲಾಖೆ ರಾತ್ರಿ ಗಸ್ತು ಹೆಚ್ಚಿಸುವಂತೆ ಸಾರ್ವಜನಿಕರು
ಆಗ್ರಹಿಸಿದ್ದಾರೆ.
ಇನ್ನೂ ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡ ರಾತ್ರಿ ತಳಕು ಹೊಬಳಿಯ ಘಟಪರ್ತಿ ಗ್ರಾಮದ ನರಸಿಂಹ ಎಂಬ ಕುರಿಗಾಯಿಯ ಎರಡು ಟಗರುಗಳನ್ನು ಕಳ್ಳರು ಕದ್ದಯೋದಿದ್ದಾರೆ.
ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಟಗರುಗಳು ತಡ ರಾತ್ರಿ ಕಳುವಾಗಿದ್ದಾವೆ ಎನ್ನಲಾಗಿದೆ.