ಚಳ್ಳಕೆರೆ : ನ್ಯಾಯಾಲಯದಲ್ಲಿ ಹೂಡಿದ ಪ್ರಕರಣ ಹಿಂಪಡೆಯಿರಿ ತದ ನಂತರ ನಿಮ್ಮ ನೇರ ನೇಮಕಾತಿ ನಡೆಯುತ್ತದೆ ಎಂದು ರಾಜ್ಯ ಸಪಾಯಿ ಕರ್ಮಚಾರಿ ಕಾರ್ಯದರ್ಶಿ ಚಂದ್ರಕಲಾ ಪೌರಕಾರ್ಮಿಕರನ್ನು ಮನಹೊಲಿಸಲು ಮುಂದಾದ ಪ್ರಸಂಗ ನಡೆಯಿತು.


ಅವರು ನಗರದ ಪ್ರವಾಸಿ ಮಂದಿರದಲ್ಲಿ ಪೌರಕಾರ್ಮಿಕರ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿದರು. ನಿಮ್ಮ ನೇರ ನೇಮಕಾತಿಗೆ ನ್ಯಾಯಾಲಾಯದ ಪ್ರಕರಣ ಅಡ್ಡಿಯಾಗುತ್ತದೆ ಆದ್ದರಿಂದ ಅದನ್ನು ವಾಪಸ್ ಪಡೆದುಕೊಳ್ಳಿ ಎಂದು ಪೌರಾಯುಕ್ತೆ ಪಿ.ಲೀಲಾವತಿ, ಕಾರ್ಯದರ್ಶಿ ಚಂದ್ರಕಲಾ ಪೌರಕಾರ್ಮಿಕನ್ನು ಮನಹೊಲಿಸಲು ಮುಂದಾದಾಗ ಕಾರ್ಮಿಕ , ನಮ್ಮ ವಯಸ್ಸಿನ ಮಾನದಂಡ ಹಕ್ಕು ಪಡೆದು ಪೌರಕಾರ್ಮಿಕ ನೇಮಕಾತಿಯಲ್ಲಿ ಅವಕಾಶ ಪಡೆಯಲು ನ್ಯಾಯಾಲಾಯದ ಮೊರೆ ಹೋದರೆ, ಬೇಡ ಅನ್ನುವುದ ಸರಿಯಲ್ಲ ಅದು ನಮ್ಮಹಕ್ಕು ನ್ಯಾಯಾಲಾಯದ ಪ್ರಕರಣ ಕೈ ಬಿಡಿ ಎಂದು ಹೇಳುವುದು ಸರಿಯಲ್ಲ, ನಮ್ಮ ಮೇಲೆ ನಮಗೆ ಭರವಸೆ ಇದೆ ಗೆದ್ದೆ ಗೆಲ್ಲುತ್ತೆವೆ ಎಂದು ಹೇಳಿದಾಗ ಅಧಿಕಾರಿಗಳು ಮೌನವಹಿಸಿದರು.

About The Author

Namma Challakere Local News
error: Content is protected !!