ಚಳ್ಳಕೆರೆ : ಪೌರಕಾರ್ಮಿಕರ ಕುಂದು ಕೊರತೆಗಳ ಸಭೆ ನಡೆಸಿದ ರಾಜ್ಯ ಸಪಾಯಿ ಕರ್ಮಚಾರಿ ಕಾರ್ಯದರ್ಶಿ ಚಂದ್ರಕಲಾ ಮಾತನಾಡಿ, ಪೌರಕಾರ್ಮಿಕರ ಮಕ್ಕಳಿಗೆ ಸರಕಾರದಿಂದ ಉಚಿತವಾಗಿ ವಿದ್ಯಾಭ್ಯಾಸ ನೀಡುತ್ತಿದೆ ಆದರಂತೆ ಪ್ರತಿಯೊಬ್ಬರು ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿಸಿಕೊಳ್ಳಬೇಕು, ಸಮಾಜ ಕಲ್ಯಾಣ ಇಲಾಕೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ನೀಡಲಾಗುವುದು ಈಗೇ ಕಾರ್ಮಿಕರ ಮಕ್ಕಳಿಗೆ ಸರಕಾರದ ಹಲವು ಯೋಜನೆ ನೀಡಿದೆ ಉಪಯೋಗಿಸಿಕೊಳ್ಳಿ, ನಿಮ್ಮ ಬೆಳಗಿನ ಉಪಾಹಾರ ಶುಚಿತ್ವವನ್ನು ಅಧಿಕಾರಿಗಳು ಕಾಪಡಬೇಕು, ಸ್ವಚ್ಚತೆ ಮಾಡುವಾಗ ಕೈಗೆ ಗ್ಲೋಸ್ ಹಾಕಿಕೊಂಡು, ಮುಖಕ್ಕೆ ಮಾಸ್ಕ ಹಾಕಿಕೊಂಡು ರಸ್ತೆಯಲ್ಲಿ ಕೆಲಸ ಮಾಡಬೇಕು, ನಿಮ್ಮ ಸಂಬಳ ಕಾಲ ಕಾಲಕ್ಕೆ ನೀಡುತ್ತಾರೆಯೇ ಇಮ್ಮ ಇಎಪ್, ಪಿಎಪ್ ಬರುತ್ತದೆಯೇ ಎಂದು ಪೌರಕಾರ್ಮಿಕರಿಂದ ಮಾಹಿತಿ ಪಡೆದರು.
ಪೌರಕಾರ್ಮಿಕ ಕೆಂಚಪ್ಪ ಮಾತನಾಡಿ ಸುಮಾರು ವರ್ಷಗಳ ಕಾಲ ಇದೇ ವೃತ್ತಿಯಲ್ಲಿ ಜೀವಿಸುತ್ತಿದ್ದೆವೆ, ಖಾಯಂ ಪೌರಕಾರ್ಮಿಕರಿಗೆ ಮಾತ್ರ ವಸತಿ ನೀಡಿದೆ ಆದರೆ ನೇರನೇಮಕಾತಿ ೨೪ ಜನ, ಹೊರಗುತ್ತಿಗೆ ಸಹಯಾಕರ ೨೭ಜನರಿಗೆ ಇದುವರೆಗೆ ಒಂದು ಸೂರು ಇಲ್ಲದೆ ಅತೀ ಕಡಿಮೆ ಸಂಬಳದಲ್ಲಿ ದುಡಿಯುತ್ತೆವೆ ಆದರೆ ಯಾವುದೇ ರೀತಿಯಲ್ಲಿ ಸಹಾಯ ಮಾಡದೆ ನಮ್ಮನ್ನು ನಿಲ್ಯರ್ಕ್ಷಸಿದೆ ಎಂದು ಮನವಿ ಮಾಡಿದರು.
ಪೌರಾಯುಕ್ತೆ ಪಿ.ಲೀಲಾವತಿ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ನಗರದ ಸ್ವಚ್ಚತೆಗೆ ಲೋರ‍್ಸ್ಗಳ ಅವಶ್ಯಕತೆ ಮೇರೆಗೆ ಸುಮಾರು ೧೨ ಖಾಲಿ ಹುದ್ದೆಗಳಿಗೆ ಟೆಂಡರ್ ಕರೆಯಲಾಗಿದೆ. ಯಾವುದೇ ಮಧ್ಯಮರ್ತಿಗಳಿಂದ ಕಚೇರಿಗೆ ಬಾರದೆ ನೇರವಾಗಿ ಬಂದು ಅರ್ಜಿ ನೀಡಿ ಕೆಲಸ ಪಡೆಯಿರಿ ಎಂದರು.
ಸಭೆಯಲ್ಲಿ ನಗಸರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ ಪ್ರಸನ್ನ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಮಂಜುನಾಥ್, ಪೌರಕಾಮಿಕರು ಹಾಜರಿದ್ದರು.
ಗಮನಿಸಿ :
ದಿನನಿತ್ಯದ ಕಾರ್ಯ ಪ್ರಾರಂಭವಾಗುವುದು ಪೌರಕಾರ್ಮಿಕರಿಂದ ಅಂತಹ ಕಾರ್ಮಿಕರ ಕುಂದು ಕೊರತೆಗಳ ಅಗತ್ಯವಾದ ರಾಜ್ಯ ಕಾರ್ಯದರ್ಶಿಗಳ ಅಧ್ಯಕ್ಷತೆ ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ ಸಭೆಯ ಅರ್ಧಕ್ಕೆ ಅನ್ಯ ಕೆಲಸವಿದೆ ಎಂದು ಜಾಗ ಖಾಲಿ ಮಾಡಿದ ಪ್ರಸಂಗ ನಡೆಯಿತು.