ಚಳ್ಳಕೆರೆ : ಸಿಡಿಲಿಗೆ ನೂರಕ್ಕೂ ಹೆಚ್ಚು ಕುರಿಗಳು ಸಾವು ಕುರಿಗಾಯಿ ಸಂಕಷ್ಟದಲ್ಲಿ
ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮದಲ್ಲಿ ಶುಕ್ರವಾರ ತಡ ರಾತ್ರಿ ಸುರಿದ ಬಾರೀ ಮಳೆಗೆ ಗುಡುಗು ಮಿಂಚು ಮಿಶ್ರಿತ ಮಳೆಯಾಗಿದ್ದು, ಸಿಡಿಲು ಬಡಿದ ಪರಿಣಾಮ 106 ಕ್ಕೂ ಹೆಚ್ಚು ಕುರಿಗಳು ಬಲಿಯಾದ ಘಟನೆ ನಡೆದಿದೆ. ಇನ್ನೂ ಘಟನಾ ಸ್ಥಳಕ್ಕೆ ತಹಶೀಲ್ದಾರ್ ರೇಹಾನ್ ಪಾಷ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮದ ಆಂಜನೇಯ 90ಹಾಗೂ, ಓಬಣ್ಣಟ6,ಇವರಿಗೆ ಸೇರಿದ ಕುರಿಗಳು ಕುರಿಹಟ್ಟಿಯಲ್ಲಿದ್ದ ಕುರಿಗಳ ಹಿಂಡಿಗೆ ಗುಡುಗು ಸಹಿಗ್ಪಿ ಮಳೆಯಿಂದಾಗಿ ಸಿಡಿಲು ಬಡಿತಕ್ಕೆ ಸಿಲುಕಿ ಕುರಿಗಳು ಮೃತ ಮಪಟ್ಟಿವೆ.
ಕಂದಾಯ ಹಾಗೂ ಪಶುಸಂಗೋಪನೆ ಹಾಗೂ ಪರಶುರಾಂಪುರ ಪೋಲಿಸ್ ಜಂಟಿ ಪರಿಶೀಲನೆ ನಡೆಸಿದ್ದು ಮೃತಪಟ್ಟ ತಲಾ ಒಂದು ಕುರಿಗೆ 5 ಸಾವಿರ ರೂ ಪರಿಹಾರ ಸಿಗಲಿದೆ ಎಂದು ತಹಶೀಲ್ದಾರ್ ರೇಹಾನ್ ಪಾಷ ತಿಳಿಸಿದ್ದಾರೆ.

About The Author

error: Content is protected !!