ಸೆ.3ರಂದು ಗೌರಸಮುದ್ರ ಮಾರಮ್ಮ ಜಾತ್ರೆ ಸಕಲ ಸಿದ್ದತೆಗೆ : ಶಾಸಕ ಎನ್ವೈ ಗೋಪಾಲಕೃಷ್ಣ ಸೂಚನೆ
ಚಳ್ಳಕೆರೆ : ಮಧ್ಯ ಕರ್ನಾಟಕದ ಶಕ್ತಿ ದೇವತೆ ಮಾರಮ್ಮದೇವಿ ದೊಡ್ಡ ಜಾತ್ರೆ ಸೆ.3ರ ಮಂಗಳವಾರ ನಡೆಯಲಿರುವ ನಿಮಿತ್ತ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಾತ್ರೆ ಸಿದ್ಧತೆ ಪೂರ್ವಭಾವಿ ಸಭೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾತ್ರೆಗೆ ಬರುವ ಭಕ್ತರಿಗೆ ಬೀದಿದೀಪ, ಕುಡಿಯುವ ನೀರು, ಸ್ವಚ್ಚತೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಜಾತ್ರೆಯಶಸ್ವಿಯಾಗುವಂತೆ ಅಧಿಕಾರಿಗಳು ಅಗತ್ಯ ಮುಂಜಾಗೃತ ಕ್ರಮ ಕೈಕೊಳ್ಳುವಂತೆ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ತಾಕೀತು ಮಾಡಿದರು.
ಜಾತ್ರೆಗಳಲ್ಲಿ ಭಕ್ತರು ಹುಂಡಿಗೆ ಹಾಕುವ ದುಡ್ಡಿನಲ್ಲಿ ಇಂತಿಷ್ಟು ಆದರೂ ಆ ದೇವಾಲಯಗಳ ಅಭಿವೃದ್ಧಿಗೆ ಹಣ ಬಳಸಬೇಕು. ಇನ್ನು ಮುಜರಾಯಿ ಇಲಾಖೆಯವರು ಬ್ಯಾಂಕ್ನಲ್ಲಿ ಕೋಟಿಗಟ್ಟಲೆ ಎಪ್ಡಿ ಮಾಡುತ್ತಾರೆಂದರೆ ಏನು ಹೇಳಲಿ, ಭಕ್ತರ ಹಣದಲ್ಲಿ ಯಾತ್ರಿ ನಿವಾಸ, ಶೌಚಾಲಯ ಹೀಗೆ ದೇವಾಲಯಗಳಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಬೇಕು ಆದರೆ ನೀವು ಕೇವಲ 20 ಲಕ್ಷದಲ್ಲಿ ಜಾತ್ರೆ ಮುಗಿಸುವುದು ಕೋಟಿಗಟ್ಟಲೆ ಹಣ ಬ್ಯಾಂಕ್ನಲ್ಲಿ ಇಡುವುದು ವಿಪರ್ಯಾಸ.
ಜಾತ್ರೆ ನಡೆಯುವ ಸ್ಥಳದಲ್ಲಿ ಜಕಾತೆ ವಸೂಲಿ ಮಾಡಬಾರದು ಇದರಿಂದ ಜಾತ್ರೆಯಲ್ಲಿ ಟ್ರಾಪಿಕ್ ಉಂಟಾಗಿ ಕಿರಿಕಿರಿ ಉಂಟಾಗುತ್ತದೆ ಎಂದು ತಳಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಾಗೇಶ್ ಹಾಗೂ ಸಾರ್ವಜನಿಕರ ಮಾತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಓಬಣ್ಣ ಮಾತನಾಡಿ ಜಾತ್ರೆ ಮುಗಿಯುವರೆಗೆ ಎಲ್ಲಾ ಕೆಲಸಗಳನ್ನು ಹಾಗೂ ಉಸ್ತೂವಾರಿಯನು ನಮ್ಮ ಗ್ರಾಮ ಪಂಚಾಯಿತಿಯಿAದ ನಡೆಯುತ್ತದೆ ಇನ್ನೂ ಕೆಲವು ಖರ್ಚುಗಳು ನಮ್ಮ ಗ್ರಾಪಂ.ಗೆ ಬರುತ್ತದೆ ಆದ್ದರಿಂದ ಎಲ್ಲಾ ಜಾತ್ರೆಗಳಲ್ಲಿ ಜಕಾತೆ ವಸೂಲಿ ಮಾಡಿದಂತೆ ಇಲ್ಲಿಯೂ ಕೂಡ ಜಕಾತೆ ವಸೂಲಿ ಮಾಡಲಾಗುತ್ತದೆ ಎಂದರು, ಹಾಗ ಧ್ವನಿ ಗೂಡಿಸಿದ ಸಾರ್ವಜನಿಕರೊಬ್ಬರು ಒಂದೇ ರಸ್ತೆಯಲ್ಲಿ ಮೂರು ಬಾರಿ ಜಕಾತಿ ವಸೂಲಿ ಮಾಡುತ್ತಾರೆ ಇದರಿಂದ ಭಕ್ತಾಧಿಗಳಿಗೆ ತೊಂದರೆಯಾಗುತ್ತದೆ ಎಂದರು.
ಕಳೆದ ವರ್ಷ ಕೊಳವೆ ಬಾವಿ ಹಾಕಿ ಟ್ಯಾಂಕ್ ನೀರು ಕಲ್ಪಿಸಲಾಗಿತ್ತು ಆದರೆ ಈ ಬಾರಿ ಎರಡು ಕೊಳವೆ ಭಾವಿಯಲ್ಲಿ ನೀರು ಭತ್ತಿಹೋಗಿವೆ ಹೊಸದಾಗಿ ಕೊಳವೆ ಭಾವಿ ಕೊರೆಸಿಕೊಡಿ ಎಂದು ಬೇಡಿಕೆ ಇಟ್ಟರು. ಇನ್ನೂ ಶಾಸಕರು ಈಗ ಸಮೃದ್ಧಿ ಮಳೆಯಾಗಿದೆ ಕೊಳವೆ ಬಾವಿಯಲ್ಲಿ ನೀರು ಬರುತ್ತಿವೆ ಚೆಕ್ ಮಾಡಿ ಎಂದರು, ಇನ್ನೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ ಎಂದರು.
ಶಾಸಕರು ಮಾತನಾಡಿ, ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಕುಡಿವ ನೀರಿನ ತೊಂದರೆಯಾಗಬಾರದು. ಇನ್ನು ಸ್ವಚ್ಛತೆ ಮತ್ತು ಕುಡಿವ ನೀರಿನ ಬಗ್ಗೆ ಎಚ್ಚರಿಕೆ ವಹಿಸಬೇಕು, ಡೆಂಗ್ಯೂ ಹಾಗೂ ಇತರೆ ಆರೋಗ್ಯ ಸಲಹೆಗಳು, ಮುಂಜಾಗ್ರತೆ ಇರಬೇಕು, ಬ್ಯಾನರ್ ಮೂಲಕ ಆರೋಗ್ಯ ಸೇವೆ ಲಭ್ಯ ಎಂಬುದು ಗೋಚರಿಸುವಂತೆ ಪ್ಲೆಕ್ಸ್ ಹಾಕಬೇಕು, ಜಾತ್ರೆಗೆ ಬರುವ ಭಕ್ತಾಧಿಗಳು ಹಾಗೂ ಸಾರ್ವಜನಿಕರಿಗೆ ಸರ್ಕಾರ ಎಲ್ಲಾ ರೀತಿಯ ಸೌಲಭ್ಯ ಒದಗಿಸುತ್ತಾರೆ ಎಂಬ ಭಾವನೆಯಿಂದ ಜಾತ್ರೆಗೆ ಆಗಮಿಸುತ್ತಾರೆ.
ದೇವಿಯ ದರ್ಶನ ಪಡೆಯಲು ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಕುಡಿಯುವ ನೀರು ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳು ಪೂರ್ಣಪ್ರಮಾಣದಲ್ಲಿ ಆಗಬೇಕು. ಆ ಭಾಗದಲ್ಲಿ ಮಳೆ ಪ್ರಮಾಣ ಇದೆ, ಜಾತ್ರೆಯ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳಿಗೆ. ಸಂಬAಧಪಟ್ಟ ಅಧಿಕಾರಿಗಳು ಅಕ್ಕಪಕ್ಕದ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಕೇಂದ್ರದಿAದ ಕುಡಿಯುವ ನೀರಿನ ಟ್ಯಾಂಕರನ್ನು ಒದಗಿಸಬೇಕು, ಗ್ರಾಮ ಪಂಚಾಯಿತಿ ಆಡಳಿತ ನೈರ್ಮಲ್ಯ ಶುದ್ದೀಕರಣ ಕಾರ್ಯವನ್ನು ನಿರ್ವಹಿಸಬೇಕು. ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಇದ್ದು ನೀರಿನ ವ್ಯವಸ್ಥೆ ಮಾಡಬೇಕು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗ್ರಾಮವನ್ನು ಸಂಪರ್ಕಿಸುವ ರಸ್ತೆಗಳ ದುರಸ್ಥಿ ಮಾಡಬೇಕು. ಗ್ರಾಮದ ಪ್ರತಿಯೊಂದು ರಸ್ತೆಗೂ ವಿದ್ಯುತ್ ದೀಪ ಅಳವಡಿಸಬೇಕು. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ನೀಡುವ ಜೊತೆಗೆ, ಕಳ್ಳಕಾರರ ಮೇಲೆ ನಿಗಾವಹಿಸಬೇಕು. ಸಾರಿಗೆ ಇಲಾಖೆ ಅಧಿಕಾರಿಗಳು ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ, ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಜಾತ್ರೆಯಲ್ಲಿ ಪ್ರಾಣ ಬಲಿ ನಿಷೇದಿಸಿದೆ, ಭಕ್ತರು ಯಾರೂ ಸಹ ಪ್ರಾಣಿ ಬಲಿಗೆ ಪ್ರಯತ್ನ ನಡೆಸಬಾರದು. ಭಕ್ತಾಧಿಗಳಿಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಪೂರೈಸಲು ಈಗಾಗಲೇ ಸಂಬAಧಪಟ್ಟ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಡಿವೈಎಸ್ಪಿ ರಾಜಣ್ಣ ಮಾತನಾಡಿ, ಪೊಲೀಸ್ ಇಲಾಖೆ ಶಾಂತಿಯುತ ಜಾತ್ರೆಗೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ, ಜಿಲ್ಲಾ ರಕ್ಷಣಾಧಿಕಾರಿ, ಹೆಚ್ಚುವರಿ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ತಳಕು ವೃತ್ತ ನಿರೀಕ್ಷಕ ಆರ್.ಎಪ್.ದೇಸಾಯಿ ಮತ್ತು ಸಿಬ್ಬಂದಿ ವರ್ಗ ಸಂಚಾರ ವ್ಯವಸ್ಥೆಯೂ ಸೇರಿದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವರು, ಜಾತ್ರೆಯಲ್ಲಿ ಬ್ಯಾರಿಕೇಡ್ ಸಮಸ್ಯೆ ಯಾಗದಂತೆ ಇಲಾಖೆ, ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಬೇಕು, ಸಿಸಿ ಕ್ಯಾಮರ ಅಳವಡಿಸಿಕೊಡಬೇಕು, ಮೊಬೈಲ್ ಟವರ್, ಇನ್ನೂ ಕಳೆದ ಬಾರಿ ಬ್ಯಾರಿಕೇಡ್ ಸಮಸ್ಯೆ ಉಂಟಾಗಿ ಬಾರಿ ಸಮಸ್ಯೆ ತಲೆದೋರಿತ್ತು ಆದ್ದರಿಂದ ಈ ಬಾರಿ ಮುಂಜಾಗ್ರತವಾಗಿ ಸಹಕಾರ ನೀಡಬೇಕು ಎಂದರು.
ಈ ಪೂರ್ವಬಾವಿ ಸಭೆಯಲ್ಲಿ ತಹಶೀಲ್ದಾರ್ ರೇಹಾನ್ಪಾಷ, ತಾಪಂ.ಕಾರ್ಯನಿರ್ವಾಹಣಾಧಿಕಾರಿ ಇಓ ಶಶಿಧರ್, ಎಇಇ ಕಾವ್ಯ, ಬಿಇಒ ಕೆ.ಎಸ್.ಸುರೇಶ್, ಕೆಎಸ್ಆರ್ಟಿಸಿ ವ್ಯವಸ್ಥಾಪಕ ಪ್ರಭು, ಸಮಾಜ ಕಲ್ಯಾಣಾಧಿಕಾರಿಗಳು, ಬಿಸಿಎಂ ಅಧಿಕಾರಿಗಳು, ಲೋಕೋಪಯೋಗಿ ಅಧಿಕಾರಿ ವಿಜಯಬಾಸ್ಕರ್, ತಳಕು ಬೆಸ್ಕಾಂ ಅಧಿಕಾರಿ ಮಮತ, ಹಾಗೂ ಸಾರ್ವಜನಿಕರು ಇತರರಿದ್ದರು