ಚಂರಡಿಗೆ ಡೆಕ್ ನಿರ್ಮಿಸುವಂತೆ ಸಾರ್ವಜನಿಕರ ಒತ್ತಾಯ : ಜಾಣ ಮೌನ ವಹಿಸಿದ ಗ್ರಾಪಂ.ಪಿಡಿಓ
ಚಳ್ಳಕೆರೆ : ಚರಂಡಿಗೆ ಅಡ್ಡವಾಗಿ ನಿರ್ಮಿಸಿರುವ ಕಾಂಕ್ರೀಟ್ ಡೆಕ್ ಹಾಳಾಗಿ ಕಬ್ಬಿಣದ ಸಲಕೆಗಳು ಹೊರಬಿದ್ದಿವೆ, ಇನ್ನೂ ಇಲ್ಲಿ ಓಡಾಡುವ ವಾಹನ ಸವಾರರೂ ಕೂಡ ಅಂಗೈಯಲ್ಲಿ ಜೀವ ಹಿಡಿದು ಓಡಾಡುವ ಅನಿವಾರ್ಯವಿದೆ.
ಹೌದು ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ರಸ್ತೆ ಮಧ್ಯದ ಡೆಕ್ ಸಂಪೂರ್ಣವಾಗಿ ಕಿತ್ತುಹೊಗಿ ಸಾರ್ವಜನಿಕರು ದಾರಿಹೋಕರು ಸಮಸ್ಯೆ ಎದುರಿಸುವಂತಾಗಿದೆ.
ಇನ್ನೂ ಈದೇ ಮಾರ್ಗದ ಮೂಲಕ ಕೊಡ್ಲಹಳ್ಳಿಗೆ ಹೋಗುವ ಮುಖ್ಯ ಮಾರ್ಗ ಇದಾಗಿದ್ದು,. ಈ ಮಾರ್ಗದ ಮೂಲಕ ಆಂದ್ರದಿAದ ವಾಹನ ಸವಾರರು ಕೂಡ ಇದೇ ದಾರಿಯನ್ನು ಅವಲಂಭಿಸಿದ್ದಾರೆ. ಆದರೆ ಸಂಬAದ ಪಟ್ಟ ಇಲಾಖೆ ಮಾತ್ರ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನಾದರೂ ಕಿತ್ತು ಹೋದ ಡೆಕ್‌ನ್ನು ಅತೀ ತುರ್ತಾಗಿ ಸರಿಪಡಿಸಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಅನೂಕೂಲ ಮಾಡುವರೋ ಕಾದು ನೋಡಬೇಕಿದೆ.