ಚಿತ್ರದುರ್ಗ: ತೋಟದ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿರುವ ದರೋಡೆಕೋರರು
ಕರ್ಪುರದಕಟ್ಟೆ ಗ್ರಾಮದ ತೋಟದ ಮನೆಯಲ್ಲಿ ಕಳ್ಳತನ ಎಸಗಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕರ್ಪುರದಕಟ್ಟೆ ಗ್ರಾಮದ ಮನೆಯಲ್ಲಿದ್ದ 80 ಸಾವಿರ ನಗದು, 200 ಗ್ರಾಂ ಚಿನ್ನಾಭರಣವನ್ನು ಚಂದ್ರಶೇಖರ್ ಎಂಬುವವರ ತೋಟದ ಮನೆಯಲ್ಲಿ
ಕಳ್ಳತನ ಮಾಡಿದ್ದಾರೆ.
ಮನೆಮಂದಿಯೆಲ್ಲಾ ಶುಭಕಾರ್ಯಕ್ಕೆ ತೆರಳಿದ್ದ ಸಮಯದಲ್ಲಿ ಈ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಹೊಸದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.