ಕೋಲ್ಕತ್ತಾದಲ್ಲಿ ಕರ್ತವ್ಯ ನಿರತ ಯುವ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಇಂದು ಭಾರತೀಯ ವೈದ್ಯಕೀಯ ಸಂಘದ ಚಳ್ಳಕೆರೆ ಶಾಖೆ, ಹಾಗೂ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಚಳ್ಳಕೆರೆ ಶಾಖೆ ವತಿಯಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮೂಲಕ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು..

ಚಳ್ಳಕೆರೆ : ಕೋಲ್ಕತ್ತಾದ ಆರ್.ಜಿ.ಕರ್ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯ ನಿರತ ಯುವ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ತುರ್ತು ಸೇವೆಗಳನ್ನು ಹೊರತುಪಡಿಸಿ, ಇತರೆ ಎಲ್ಲಾ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಲು ಭಾರತೀಯ ವೈದ್ಯಕೀಯ ಸಂಘವು 17 ಆಗಸ್ಟ್ ರಂದು ದೇಶಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನೆಗೆ ಭಾರತೀಯ ವೈದ್ಯಕೀಯ ಸಂಘದ ಚಳ್ಳಕೆರೆ ಶಾಖೆ, ಹಾಗೂ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಚಳ್ಳಕೆರೆ ಶಾಖೆ ಬೆಂಬಲ ವ್ಯಕ್ತಪಡಿಸಿ ತಹಶಿಲ್ದಾರ್ ಗೆ ಮನವಿ ಸಲ್ಲಿಸಿದರು.
ಅವರು ನಗರದ ವಾಲ್ಮೀಕಿ ವೃತ್ತದಿಂದ ಪ್ರಾರಂಭಗೊAಡ ಮುಷ್ಕರ ಮೆರವಣಿಗೆ ಅಂಬೇಡ್ಕರ್ ವೃತ್ತ, ನೆಹರು ವೃತ್ತದ ಮೂಲಕ ತಹಶಿಲ್ದಾರ್ ಕಚೇರಿಗೆ ಎಲ್ಲಾ ವೈಧ್ಯರು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು.
ಇನ್ನೂ ಭಾರತೀಯ ವೈದ್ಯಕೀಯ ತಾಲೂಕು ಸಂಘದ ಅಧ್ಯಕ್ಷ ಡಾ.ನಟರಾಜ್ ಮಾತನಾಡಿ, ವೈದ್ಯಾಧಿಕಾರಿಗಳು ದಿನದ 24*7 ಗಂಟೆ ಬಡ ರೋಗಿಗಳಿಗೆ ತಪಾಸಣೆ ಮತ್ತು ಚಿಕಿತ್ಸೆ ನೀಡುತ್ತಿದ್ದು, ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಹಾಗೂ ಕೋವಿಡ್-19 ನಂತಹ ಸಾಂಕ್ರಾಮಿಕ ರೋಗವು ಇಡೀ ಪ್ರಪಂಚವನ್ನೇ ಭಾಧಿಸಿದ ಸಂದರ್ಭದಲ್ಲಿ ವೈದ್ಯರುಗಳು ಹಗಲಿರುಳು ಎನ್ನದೇ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಶ್ರಮಿಸಿರುತ್ತಾರೆ. ಆದರೆ ಈ ಪ್ರಕರಣ ವೈದ್ಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಇಂಡಿಯಾನ್ ಮೆಡಿಕಲ್ ಅಸೋಶಿಯನ್ ಸಂಘದ ಕಾರ್ಯದರ್ಶಿ ಡಾ.ಅರುಣ್ ಕುಮಾರ್ ಕೂನ ಮಾತನಾಡಿ, ಈ ಘಟನೆಯಿಂದ ವೈಧ್ಯಕೀಯ ಹಾಗೂ ಸಿಬ್ಬಂದಿ ವರ್ಗ ಕುಗ್ಗುವಂತೆ ಮಾಡಿದ್ದು, ಇದನ್ನು ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಹಾಗೂ ಇತರೆ ಸಂಘಗಳು ಗಂಭೀರವಾಗಿ ಖಂಡಿಸುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಅಹಿತಕರ ಪ್ರಕರಣಗಳು ಮರುಕಳಿಸದಂತೆ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಸೂಕ್ತ ಭದ್ರತೆ ಮತ್ತು ರಕ್ಷಣೆಯನ್ನು ಒದಗಿಸಿ, ಕಾನೂನು ರೂಪಿಸಬೇಕು, ವೈದ್ಯರ ಮನೋಸ್ಥೆರ್ಯವನ್ನು ಹೆಚ್ಚಿಸಿ, ನಿರ್ಭೀತಿಯಿಂದ ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ನೀಡಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸುತ್ತೆನೆ ಎಂದು ಸರಕಾರನ್ನು ಒತ್ತಾಯಿಸಿದರು.
ಹಿರಿಯ ವೈದ್ಯಾಧಿಕಾರಿ ಡಾ.ಚಂದ್ರನಾಯ್ಕ್ ಮಾತನಾಡಿ, 09 ಆಗಷ್ಟ್ ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದ ಆರ್.ಜಿ.ಕರ್ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಯುವ ವೈದ್ಯೆಯವರನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಇಡೀ ವೈದ್ಯ ಸಮೂಹಕ್ಕೆ ಮಾಡಿದ ಘೋರ ಅಪರಾಧವಾಗಿದ್ದು, ಕಾನೂನಿನ ವೈಪಲ್ಯವನ್ನು ಎತ್ತಿ ಹಿಡಿಯುತ್ತದೆ. ಅಲ್ಲದೇ ಈ ಪ್ರಕರಣವು ವೈದ್ಯರುಗಳ ಮನೋಸ್ಥೆರ್ಯ ಕುಗ್ಗಿಸುವಂತಾಗಿದೆ ಎಂದು ಆದ್ದರಿಂದ ನಮಗೆ ನ್ಯಾಯ ಸಿಗುವ ತನಕ ಹೋರಾಟ ನಿರಂತರವಾಗಿ ಇರುತ್ತೆ ಎಂದರು.
ನಿದೇರ್ಶಕ ಡಾ.ಡಿಎನ್.ಮಂಜುನಾಥ್ ಮಾತನಾಡಿ, ಕರ್ತವ್ಯ ನಿರತ ಯುವ ವೈದ್ಯೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ಮಾಡಿರುವ ಹೋರಾಟ ವೈಧ್ಯರಿಗೆ ರಕ್ಷಣೆ ಹಾಗೂ ನ್ಯಾಯ ಸಿಗುವಂತಾಗಬೇಕು, ರಾಜ್ಯ ಸರಕಾರ ಈ ಕೂಡಲೇ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತಾಗಬೇಕು ಎಂದು ಒತ್ತಾಯಿಸಿದರು.
ಇದೇ ಸಂಧರ್ಭದಲ್ಲಿ ಡಾ.ಓಬಣ್ಣ ಪೂಜಾರ್, ಡಾ.ಜಯಕುಮಾರ್, ಡಾ.ಕೃಷ್ಣರಾಜ್, ಡಾ.ಶ್ರೀನಿನಾಥ್, ಡಾ.ತಿಪ್ಪೆಸ್ವಾಮಿ,ಡಾ.ಚೌಡಪ್ಪ, ಡಾ.ಮಂಜುನಾಥ್,ಡಾ.ರಾಘವೇAದ್ರ,ಡಾ.ಜಯಲಕ್ಷಿö್ಮ,ಡಾ.ಮAಜುನಾಥ್ ಬಾಬು, ಡಾ.ಎಸ್.ಎಂ.ಆದಿಮನಿ, ಡಾ.ನಟರಾಜ್, ಡಾ.ಪ್ರಜ್ವಲ್ ಧನ್ಯ, ಡಾ.ಸಂಜಯ್, ಡಾ.ಪುನಿತ್‌ಸಿರಿಗೆ, ಡಾ.ನೂತನ್‌ಬಾಬು, ಡಾ.ಅಜಯ್, ಡಾ.ಲೋಕೇಶ್, ಡಾ.ಚಂದ್ರನಾಯ್ಕ್, ಡಾ.ವಿಯಯೇಂದ್ರ, ಡಾ.ಬಿ.ರಾಕೇಶ್, ಡಾ.ಶಂಕರ್ ಲಕ್ಷಿö್ಮ, ಸುರಕ್ಷಾ ಪಾಲಿ ಕ್ಲಿನಿಕ್ ಬಿ.ಪರೀಧ್ ಖಾನ್, ಇತರ ವೈದ್ಯರು, ನರ್ಸಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!