ಮಾದಯ್ಯನಹಟ್ಟಿ ಕಾವಲು ಬಸವೇಶ್ವರ ಸ್ವಾಮಿಯ
ಶ್ರಾವಣ ಮಾಸದ ವಿಶೇಷ ಪೂಜಾ ಕಾರ್ಯ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಜರುಗಿತು ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ

ನಾಯಕನಹಟ್ಟಿ:: ಪಟ್ಟಣ ಪಂಚಾಯತಿ ವ್ಯಾಪ್ತಿಯ ಮಾದಯ್ಯನಹಟ್ಟಿ ಗ್ರಾಮದಲ್ಲಿ
ಕಾವಲು ಬಸವೇಶ್ವರ ಶ್ರಾವಣ ಮಾಸದ ವಿಶೇಷ ಪೂಜಾ ಕೈಗಾರಿಗಳು ನೆರವೇರಿತು.

ಇದು ವೇಳೆ ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ.
ಬಸಪ್ಪನಾಯಕ ಮಾತನಾಡಿದರು ನಾಯಕನಹಟ್ಟಿ ಮತ್ತು ಮಾದಯ್ಯನಹಟ್ಟಿ ಗ್ರಾಮಸ್ಥರು 12 ಮತ್ತು 13ನೇ ಶತಮಾನದಿಂದಲೂ ಪೂರ್ವಿಕರು ಶ್ರೀ ಕಾವಲಬಸವೇಶ್ವರ ಸ್ವಾಮಿ ಶ್ರಾವಣ ಮಾಸದ ಎರಡನೇ ಗುರುವಾರ ಪ್ರತಿ ವರ್ಷ ಸಂಪ್ರದಾಯದಂತೆ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಪಟ್ಟದ ಬಸವಣ್ಣನ ಕರೆತಂದು 101 ಅಭಿಷೇಕ 101 ಕೊಡ ನೀರು ಹಾಕಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಪ್ರತಿ ವರ್ಷವೂ ಎಂತಹ ಬರಗಾಲ ಬಂದರು ಸಹ ಕಾವಲಬಸ್ವೇಶ್ವರ ಸ್ವಾಮಿ ಪೂಜೆ ಮಾಡಿ ದೇವಸ್ಥಾನಕ್ಕೆ ಪಟ್ಟದ ಬಸವ ಗುಡಿ ತುಂಬುವುದರೊಳಗಾಗಿ ಎರಡು ಹನಿಯಾದರೂ ಮಳೆ ಬರುತ್ತದೆ ಎಂಬ ನಂಬಿಕೆ. ಮಾರ್ಗದಲ್ಲಿ ಒಮ್ಮೆ ದಾರಿಯಲ್ಲಿ ಬಸವಣ್ಣನ ಯಾರು ಹಾಕಿಕೊಂಡು ಹೋಗುವಾಗ ಈ ಸ್ಥಳದಲ್ಲಿ ಬಿದ್ದು ಬಸವಣ್ಣ ಐಕ್ಯವಾಗಿರುತ್ತದೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಡೆ ಮುಖ ಮಾಡಿ ಬಿದ್ದಿರುವುದರಿಂದ ಕಾವಲು ಬಸಪ್ಪ ಎಂದು ಖ್ಯಾತಿಯನ್ನ ಪಡೆದಿದೆ. ಶ್ರಾವಣ ಮಾಸದ ಎರಡನೇ ಗುರುವಾರ ಕಾವಲು ಬಸವೇಶ್ವರ ಸ್ವಾಮಿ ಪೂಜೆ ಮಾಡಿದರೆ ಮೂರನೇ ವಾರ ಏಕಾಂತ ಮಠ ನಾಲ್ಕನೇ ವಾರ ಕೆರೆ ಗಂಗಮ್ಮನೊಂದಿಗೆ ಶ್ರಾವಣ ಮಾಸ ಮುಕ್ತಾಯವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಕೆ.ಪಿ. ತಿಪ್ಪೇಸ್ವಾಮಿ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ, ಪೂಜಾರಿ ತಿಪ್ಪಯ್ಯ, ಪಾಲಯ್ಯ, ಯಜಮಾನ ಓಬಯ್ಯ ,ಕಾಳಪ್ಪ ,ಬಸವರಾಜ್ ಹಿರೇಮಠ, ಆರ್ ಟಿ ತಿಪ್ಪೇಸ್ವಾಮಿ ,ತಿಪ್ಪೇಸ್ವಾಮಿ, ಕೆಇಬಿ ಗುತ್ತಿಗೆದಾರರು
ಓಂ ಪ್ರಕಾಶ್ , ಕೆ ಟಿ ತಿಪ್ಪೇಸ್ವಾಮಿ, ಜಯಣ್ಣ, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ್, ಸೇರಿದಂತೆ ಸಮಸ್ತ ನಾಯಕನಹಟ್ಟಿ ಮತ್ತು ಮಾದಯ್ಯನಹಟ್ಟಿ ಗ್ರಾಮಸ್ಥರು ಇದ್ದರು.

About The Author

Namma Challakere Local News
error: Content is protected !!