ಚಳ್ಳಕೆರೆ : ದೇಶದ ಗಡಿಯಲ್ಲಿ ಸೈನಿಕರು ಪ್ರಾಣತ್ಯಾಗ ಮಾಡಿ ದೇಶವನ್ನು ರಕ್ಷಣೆ ಮಾಡಿದ್ದಾರೆ, ಸ್ವಾತಂತ್ರ‍್ಯೋತ್ಸವವು ರಾಷ್ಟçಕ್ಕೆ ಮಹತ್ವದ ದಿನಾಚರಣೆ. ದೇಶವು ಮಹಾನ್ ನಾಯಕರ ತ್ಯಾಗ ಬಲಿದಾನ ಹೋರಾಟದ ಮೂಲಕ ದಾಸ್ಯದ ಸಂಕೋಲೆಯಿAದ ಹೊರಬಂದ ಅಪೂರ್ವ ದಿನವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಬಿಸಿನೀರು ಮುದ್ದಪ್ಪ ಪ್ರೌಡಶಾಲಾ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ 77ನೇ ಸ್ವಾತಂತ್ರö್ಯ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಸ್ವಾತಂತ್ರö್ಯ ದಿನಾಚರಣೆ ಎಂದರೆ ಶಿಸ್ತಿನ ಆಚರಣೆ. ಶಿಸ್ತನ್ನು ಸಂತೋಷವಾಗಿ ಆಚರಿಸುವುದು ಈ ದಿವಸವಾಗಿದೆ, ಆದರೆ ಶಾಲಾ ಮಕ್ಕಳಿಲ್ಲದ ಸ್ವಾತಂತ್ರö್ಯ ದಿನಾಚರಣೆಯನ್ನು ಇಂದು ನಾವು ಆಚರಣೆ ಮಾಡುತ್ತಿದ್ದೆವೆ, ಇಂದು ಪ್ರತಿಯೊಬ್ಬರು ವಿದ್ಯಾವಂತರಾಗಬೇಕು. ಶಿಕ್ಷಣ ಎಲ್ಲ ರಂಗದಲ್ಲೂ ಇರಬೇಕು. ಪ್ರತಿಯೊಬ್ಬರಿಗೂ ಅವಕಾಶಗಳು ದೊರೆತು ಪ್ರಾಮಾಣಿಕತೆಯಿಂದ ಅವುಗಳನ್ನು ನಿಭಾಯಿಸುವಂತಾಗಬೇಕು ಚಳ್ಳಕೆರೆಯ ಬರಗಾಲ ಪೀಡಿತ ಪ್ರದೇಶ ಇಲ್ಲಿ ಹೆಚ್ಚಿನದಾಗಿ ಮಳೆ ಬಂದರೆ ಮಾತ್ರ ಜನ ಜೀವನ ಹಸನಾಗುತ್ತದೆ ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ, ಸ್ವಾತಂತ್ರö್ಯದಿನಾಚರಣೆ ದೇಶದ ತುಂಬೆಲ್ಲ ಮನೆಮಾಡಿದೆ ಅಂದು ಬ್ರಿಟೀಷರು ಭಾರತಕ್ಕೆ ಬಂದು, ನಮ್ಮವರ ಸಾಮಾಜಿಕ ಸ್ಥಿತಿಗತಿಯನ್ನು ಅಧ್ಯಯಿಸಿ ಭಾರತಕ್ಕೆ ಬೇಕಾದ ಒಡೆದು ಆಳುವ ತಂತ್ರವನ್ನು ಅನ್ವಯಿಸುತ್ತ ಹೋದರು. ಅದರಿಂದ ದೇಶವು ಅಭದ್ರವಾಯಿತು. ಹಂತ ಹಂತವಾಗಿ ನಾವು ಪರಕೀಯರಿಗೆ ಗುಲಾಮರಾದೆವು. ದೇಶವನ್ನು ಅಭದ್ರಗೊಳಿಸಲು ನಮ್ಮೊಳಗಿನ ಪಟ್ಟಭದ್ರ ಹಿತಾಸಕ್ತಿಯನ್ನು ಬಳಸಿಕೊಂಡರು, ಸ್ವಾತಂತ್ರö್ಯವು ಪ್ರತಿಯೊಬ್ಬ ಪ್ರಜೆಗೂ ನ್ಯಾಯ ಸಮ್ಮತ ಹಕ್ಕನ್ನು ನೀಡಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ರಾಘವೇಂದ್ರ, ಬಿ.ಟಿ.ರಮೇಶ್‌ಗೌಡ, ವಿಶುಕುಮಾರ್, ಕೆ.ವೀರಭದ್ರಪ್ಪ, ವಿರುಪಾಕ್ಷ, ಜಯಣ್ಣ, ವಿ.ವೈ.ಪ್ರಮೋದ್, ಶ್ರೀನಿವಾಸ್, ಮಂಜುಳಪ್ರಸನ್ನ, ನಿರ್ಮಲ, ಕವಿತಾ, ಸುಜಾತ್, ಸಾಕಮ್ಮ, ನಾಗವೇಣಿ, ಸುಮಭರಮಯ್ಯ, ಹಳೆನಗರದ ವೀರಭದ್ರಪ್ಪ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶಶಿದರ್, ಸುರೇಶ್, ಖಾದರ್, ಪರೀದ್‌ಖಾನ್, ಚಳ್ಳಕೆರೆಪ್ಪ, ಮಾಜಿ ಜಿಪಂ.ಸದಸ್ಯ ಬಿ.ಪಿ.ಪ್ರಕಾಶ್‌ಮೂರ್ತಿ, ಗಾಯಕ ಮುತ್ತುರಾಜ್, ಇಓ.ಶಶಿಧರ್, ಡಿವೈಎಸ್‌ಪಿ ಬಿಟಿ.ರಾಜಣ್ಣ, ವೃತ್ತ ನಿರೀಕ್ಷಕ ಆರ್‌ಎಪ್ ದೇಸಾಯಿ, ಪೌರಾಯುಕ್ತ ಜಗರೆಡ್ಡಿ, ಬಿಇಓ.ಕೆ.ಎಸ್.ಸುರೇಶ್, ಎಇಇ ಕಾವ್ಯ, ಅಬಕಾರಿ ನೀರಿಕ್ಷಕ ನಾಗರಾಜ್, ಇತರ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಪೊಟೋ, 1.ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಪ್ರೌಡಶಾಲಾ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ 77ನೇ ಸ್ವಾತಂತ್ರö್ಯ ದಿನಾಚರಣೆಯಲ್ಲಿ ಶಾಸಕ ಟಿ.ರಘುಮೂರ್ತಿ ಮಾತನಾಡಿದರು.
ಪೊಟೋ,2 ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಪ್ರೌಡಶಾಲಾ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ 77ನೇ ಸ್ವಾತಂತ್ರö್ಯ ದಿನಾಚರಣೆಯಲ್ಲಿ ವಿವಿಧ ಸಾಧಕರಿಗೆ ಸನ್ಮಾನ ಮಾಡಿದರು.

Namma Challakere Local News
error: Content is protected !!