ಚಳ್ಳಕೆರೆ :
ಕಳೆದ ಹಲವುದಿನಗಳಿಂದ ಮಳೆ ಇಲ್ಲದೆ ಪರಿತಪ್ಪಿಸುವ ರೈತಾಪಿ ವರ್ಗಕ್ಕೆ ಮಳೆ ಬಂದು ಕೊಂಚ ನಿರಾಳವಾದರೆ ತಗ್ಗು ಪ್ರದೇಶದ ನಿವಾಸಿಗಳಿಗೆ ಮಳೆ ಅವಾತಂರದಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಮಳೆ ಅವಾಂತರಕ್ಕೆ ಅಂಗಡಿಗಳಿಗೆ ನುಗ್ಗಿದ ನೀರು
ಚಿತ್ರದುರ್ಗದಲ್ಲಿ ನಿರ್ಮಿಸಿರುವ ಅವೈಜ್ಞಾನಿಕ, ಡಿವೈಡರ್ ಹಾಗೂ
ಚರಂಡಿ ವ್ಯವಸ್ಥೆಯಿಲ್ಲದ ಕಾರಣ, ರಾತ್ರಿ ಸುರಿದ ಮಳೆ ನೀರು
ಅಂಗಡಿಗಳಿಗೆ, ನುಗ್ಗಿ ಲಕ್ಷಾಂತರ ರೂಪಾಯಿ ವಸ್ತುಗಳು ನೀರು
ಪಾಲಾಗಿರುವ ಘಟನೆ ನಡೆದಿದೆ.
ಬಿ ಡಿ ರಸ್ತೆಯ ಜವಳಿ, ಸ್ಟೀಲ್ ಅಂಗಡಿಗಳು ಸೇರಿದಂತೆ ಅನೇಕ
ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ಚರಂಡಿಯಲ್ಲಿ ಹರಿದು
ಹೋಗಲು ಜಾಗವಿಲ್ಲದೆ, ಕಲ್ಲು ಬಂಡೆ ಕೊಚ್ಚಿಕೊಂಡು, ಅಂಗಡಿ
ಶೆಟ್ಟರ್ ಮುರಿದು ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ
ಸಂಭವಿಸಿದೆ.