ಚಳ್ಳಕೆರೆ : ಕಳೆದ ಹಲವಾರು ದಿನಗಳಿಂದ ತಾಲ್ಲೂಕು ಕಛೇರಿ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ ಸೋಮಗುದ್ದು ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಜಿಗುಂಟೆ ಗ್ರಾಮದ ದಲಿತರ ಹೋರಾಟಕ್ಕೆ ತಹಶಿಲ್ದಾರ್ ರೇಹಾನ್ ಪಾಷ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್
ಹಾಗೂ ಸ್ಥಳೀಯ ಶಾಸಕ ಟಿ.ರಘುಮೂರ್ತಿ ರ ಸೂಚನೆ ಹಾಗೂ ನಿವೇಶನ ರಹಿತ ರಿಗೆ ಭೂಮಿ ನೀಡುವ ಸರ್ಕಾರದ ನಿರ್ದೇಶನ ದಿಂದ
ಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಗಂಜಿಗುಂಟೆ ಗ್ರಾಮದ ರಿ.ಸ.ನಂ 105 ರಲ್ಲಿ 5.00 ಎಕರೆ ಜಮೀನು
ಆಶ್ರಯ ಯೋಜನೆಗೆ ಮಂಜೂರಾಗಿದ್ದು ನಿವೇಶನ ಹಂಚಿಕೆ ಮಾಡಲು
ಅರ್ಹ ನಿವೇಶನ ರಹಿತ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿದ್ದು

ರಜೆ
ದಿನಗಳನ್ನು ಹೊರತು ಪಡಿಸಿ
ದಿನಾಂಕ12.08.2024 ರಿಂದ 30.09.2024 ರೊಳಗಾಗಿ ಈ ಕೆಳಕಂಡ
ದಾಖಲಾತಿಗಳೊಂದಿಗೆ ಗ್ರಾಮ ಪಂಚಾಯಿತಿ ಕಛೇರಿ ವೇಳೆಯಲ್ಲಿ
ಅರ್ಜಿಯನ್ನು ಸಲ್ಲಿಸುವಂತೆ ಗ್ರಾಪಂ.ಅಧ್ಯಕ್ಷರು ಹಾಗೂ ಅಭಿವೃದ್ಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ದಾಖಲೆಗಳ ವಿವರ:-
*ಅರ್ಜಿದಾರರು ಕಡ್ಡಾಯವಾಗಿ ಮಹಿಳೆಯಾಗಿರತಕ್ಕದ್ದು. (ಮಾಜಿ
ಯೋಧರು,ಅಂಗವಿಕಲರು, ಹಿರಿಯ ನಾಗರಿಕರಾಗಿದ್ದಲ್ಲಿ ಪುರುಷರು
ಸಹ ಅರ್ಹರಾಗಿರುತ್ತಾರೆ.

*ಅರ್ಜಿದಾರರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ, ಹಿಂದುಳಿದಿದ್ದಲ್ಲಿ
ವಾರ್ಷಿಕ ಆದಾಯ ರೂ 12 ಲಕ್ಷ ರೂಗಳ ಮಿತಿಯೊಳಗಿರತಕ್ಕದ್ದು.(ಜಾತಿ
ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು

  • ಅರ್ಜಿದಾರರ ಕುಟುಂಬಗಳ ವಸತಿ ಮತ್ತು ನಿವೇಶನ
    ರಹಿತರಾಗಿರತಕ್ಕದ್ದು ಅರ್ಜಿದಾರರು ಕುಟುಂಬದ ಸದಸ್ಯರ ಹೆಸರಿನಲ್ಲಿ
    ಕರ್ನಾಟಕ ಯಾವುದೇ ಭಾಗದಲ್ಲಿ ಸ್ವಂತ ಮನೆ ಮತ್ತು ನಿವೇಶನ
    ಹೊಂದಿರಬಾರದು.
  • ಬೇರೆ ಯಾವುದೇ ಯೋಜನೆ/ಇಲಾಖೆಯಿಂದ ಈಗಾಗಲೇ ವಸತಿ/
    ನಿವೇಶನ ಸೌಲಭ್ಯ ಪಡೆದಿರಬಾರದು.
  • ಅರ್ಜಿದಾರರು ಬಿ.ಪಿ.ಎಲ್ /ಅಂತ್ಯೋದಯ ಪಡಿತರ ಚೀಟಿ, ಜಾತಿ
    ಮತ್ತು ಆದಾಯ ಪ್ರಮಾಣ ಪತ್ರ, ಆದಾರ ಕಾರ್ಡ್,
    ಭಾವಚಿತ್ರ ಜೆರಾಕ್ಸ್‌ನಕಲು ಪ್ರತಿಗಳನ್ನು ಸಲ್ಲಿಸುವುದು.
  • ಅರ್ಜಿದಾರರು ರೂ,100=00 ಛಾಪಾ ಕಾಗದದಲ್ಲಿ ನಾವು ಈ ಹಿಂದೆ
    ಯಾವುದೇ ಯೋಜನೆಯಡಿ ವಸತಿ/ನಿವೇಶನಗಳನ್ನು ಪಡೆದಿಲ್ಲ ನಾವು
    ನೀಡಿದ ಎಲ್ಲಾ ದಾಖಲೆಗಳು ಸತ್ಯದಿಂದ ಕೂಡಿರುತ್ತದೆಂದು ಸ್ವಯಂ
    ದೃಢೀಕರಣ ನೀಡುವುದು.
    ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಮಯದಲ್ಲಿ ಗ್ರಾಪಂ ಕಚೇರಿಗೆ ಭೇಟಿ
    ನೀಡಿ ಹೆಚ್ಚಿನ ಮಾಹಿತಿ ಪಡೆಯುವಂತೆ ಗ್ರಾಪಂ ಅಧ್ಯಕ್ಷರು ಹಾಗೂ
    ಅಧಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Namma Challakere Local News
error: Content is protected !!