ಚಳ್ಳಕೆರೆ : ರಾತ್ರೋರಾತ್ರಿ ಈರುಳ್ಳಿ ಬೆಳೆಗೆ ಕಳೆ ನಾಶಕ ಸಿಂಪಡಣೆ ಮಾಡಿರುವ ಘಟನೆ ಜರುಗಿದೆ.
.
ಹೌದು ಚಳ್ಳಕೆರೆ ತಾಲೂಕಿನ ನನ್ನಿವಾಳ ಸಮೀಪ ಗ್ರಾಮದ
ಮಂಜುನಾಥರೆಡ್ಡಿ ತೋಟದಲ್ಲಿ ಈ ಘಟನೆ ನಡೆದಿದೆ.

ಯಾರೋ‌ ಕಿಡಿಗೇಡಿಗಳು ರಾತ್ರೋರಾತ್ರಿ ಕಿಟನಾಶಕ ಸಿಂಪಡಣೆ ಮಾಡಿರುವುದರಿಂದ ಈರುಳ್ಳಿ ಬೆಳೆ ಸಂಪೂರ್ಣವಾಗಿ
ಒಣಗುತ್ತಿರುವ ದೃಶ್ಯ ಕಂಡ ರೈತ ಮಂಜುನಾಥ್ ‌ಸಾಲದ ಸುಳಿಯಲ್ಲಿ ಸಿಲುಕುವ ಆತಂಕ ಮನೆ ಮಾಡಿದೆ.

ರೈತ ಮಂಜುನಾಥರೆಡ್ಡಿ ಸುಮಾರು 4 ಎಕರೆಯಲ್ಲಿ ಈರುಳ್ಳಿ ಬೆಳೆಯನ್ನು
ಸಮೃದ್ಧವಾಗಿ ಬೆಳೆಸಿದ್ದಾರೆ.

ಬೆಳೆ ಸಹಿಸದ ಯಾರೋ ಕಿಡಿಗೇಡಿಗಳು ಬೆಳೆ
ನಾಶವಾಗುವ ಔಷಧಿಯನ್ನು ಈರುಳ್ಳಿಗೆ ಸಿಂಪಡಣೆ ಮಾಡಿರುವುದರಿಂದ
ಈರುಳ್ಳಿ ಬೆಳೆ ನಷ್ಟವಾಗಿದ್ದು ರೈತ ಆತಂಕಗೊಂಡಿದ್ದಾನೆ..

About The Author

Namma Challakere Local News
error: Content is protected !!