ಮೊಬೈಲ್ ಯುಗದಲ್ಲಿ ಬ್ಯಾಂಕಿನ ವ್ಯವಹಾರ ಹಾಗೂ ಸಾಲ ಸೌಲಭ್ಯಗಳ ಪಡೆಯಲು ಜಾಣರು ಆದರೂ ಸಹ ಜಾಗೃತರಾಗಿ ಸಿ.ಎಸ್ .ಗೌಡ

ನಾಯಕನಹಟ್ಟಿ:: ಆರ್ ಬಿ ಐ ಬ್ಯಾಂಕ್ ದೇಶದ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಬ್ಯಾಂಕಿನ ವ್ಯವಹಾರ ಹಾಗೂ ಸಾಲ ಸೌಲಭ್ಯಗಳ ಮಾಹಿತಿ ನೀಡಲು ಸಂಘಮಿತ್ರ ಮತ್ತು ಮೈರಾಡ ಸಂಸ್ಥೆಯೊಂದಿಗೆ ಕೈಜೋಡಿಸಿ ತರಬೇತಿ ನೀಡುತ್ತಿದೆ. ಎಂದು ಮೈರಾಡ ಸಂಸ್ಥೆಯ ಸಿ ಎಸ್ ಗೌಡ ಹೇಳಿದ್ದಾರೆ.

ಶುಕ್ರವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಹೊರಮಠ ಯಾತ್ರಿ ನಿವಾಸದಲ್ಲಿ
ಆರ್ ಬಿ ಐ
ಡಿಇಎ ಫಂಡ್ ಅಡಿಯಲ್ಲಿ ಸಂಘಮಿತ್ರ ಗ್ರಾಮೀಣ ಹಣಕಾಸು ಸಂಸ್ಥೆ ಹಾಗೂ ಮೈರಾಡ ಸಹಯೋಗದಲ್ಲಿ
ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮವನ್ನು ಸಸಿಗೆ ನೀರಿರೆದು ಉದ್ಘಾಟಿಸಿ ಸಭೆಯಲ್ಲಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಬ್ಯಾಂಕಿನ ವ್ಯವಹಾರ ಸಾಲ ಸೌಲಭ್ಯಗಳ ಮಾಹಿತಿ ಪಡೆಯಲು ಆರ್.ಬಿ.ಐ ಬ್ಯಾಂಕ್ ಸಂಸ್ಥೆ ಇಂತಹ ಒಂದು ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಆದರಿಂದ ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಪುರುಷರು ಬ್ಯಾಂಕಿನ ವ್ಯವಹಾರ ಮತ್ತು ಸಾಲ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸದೃಢರಾಗಿ ಜೀವನವನ್ನು ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಇನ್ನೂ ನಾಯಕನಹಟ್ಟಿ ಕೆನರಾ ಬ್ಯಾಂಕ್ ವಲಯ ಅಧಿಕಾರಿ ಆರ್ ಸಿ. ಪ್ರಿಯಾಂಕ ಮಾತನಾಡಿದರು ಮಹಿಳೆಯರು ಬ್ಯಾಂಕಿನಲ್ಲಿ ಹಣ ಬಿಡಿಸಿಕೊಂಡು ಹೋಗೋದಕ್ಕೆ ಮಾತ್ರ ಸೀಮಿತವಾಗಬಾರದು ಬ್ಯಾಂಕಿನಲ್ಲಿ ಸಾಲ ಸೌಲಭ್ಯಗಳ ಮಾಹಿತಿ ಪಡೆದುಕೊಳ್ಳಬೇಕು ಮಹಿಳೆಯರಿಗೆ ರಾಜ್ಯ ಸರ್ಕಾರ ನೀಡಿರುವ ಗೃಹಲಕ್ಷ್ಮಿ ಯೋಜನೆ ಸುಕನ್ಯಾ ಸಮೃದ್ಧಿ ಯೋಜನೆ ಅಟಲ್ ಪೆನ್ಷನ್ ಯೋಜನೆ ಸೇರಿದಂತೆ ಸಾಕಷ್ಟು ಯೋಜನೆಗಳ ಸಾಲ ಸೌಲಭ್ಯವನ್ನು ಬ್ಯಾಂಕುಗಳು ನೀಡುತ್ತವೆ ಇದರ ಸದುಪಯೋಗವನ್ನು ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಪುರುಷರು ಪಡೆದುಕೊಳ್ಳಬೇಕು ಎಂದರು

ಈ ಸಂದರ್ಭದಲ್ಲಿ ಸಂಘ ಮಿತ್ರ ಗ್ರಾಮೀಣ ಹಣಕಾಸು ಸಂಸ್ಥೆಯ ಎಚ್.ಎಂ. ನಾಗರಾಜ್, ವಲಯ ವ್ಯವಸ್ಥಾಪಕ ಎಂ. ರಮೇಶ್, ಕೆ ಎಂ. ಸುನಿಲ್ ಕುಮಾರ್, ಮೈರಾಡ ಸಂಸ್ಥೆ ಸಿ.ಎಸ್. ಗೌಡ್ರು, ಯೋಜನಾಧಿಕಾರಿ ಶಿವಕುಮಾರ್, ತರಬೇತಿದಾರ ಜಿ.ಸಿ ಬಾಲಯ್ಯ ಜೋಗಿಹಟ್ಟಿ, ಸಂಪನ್ಮೂಲ ಕೇಂದ್ರದ ವ್ಯವಸ್ಥಾಪಕಿ ಲಕ್ಷ್ಮಿ, ಸಂಪನ್ಮೂಲ ಕೇಂದ್ರದ ಕಾರ್ಯಕರ್ತರಾದ ವಿಜಯಮ್ಮ, ಚೈತ್ರ ಮ್ಯಾಸರಹಟ್ಟಿ, ಮತ್ತು ಹೋಬಳಿಯ ವಿವಿಧ ಸ್ವ.ಸಹಾಯ ಸಂಘಗಳ ಸದಸ್ಯರು ಇದ್ದರು

Namma Challakere Local News
error: Content is protected !!