ಚಳ್ಳಕೆರೆ :
ವೇದಾಂತ ಮೈನಿಂಗ್ ನಿಂದಾಗುತ್ತಿರುವ ಅನ್ಯಾಯ
ಸರಿಪಡಿಸಿ
ಹೊಳಲ್ಕೆರೆ ತಾಲೂಕಿನ ವೇದಾಂತ ಮೈನ್ಸ್ ವಿರುದ್ಧ ಲಾರಿ
ಮಾಲೀಕರು, ಲೋಡುಗಳ ಕೊಡುವಂತೆ ಒತ್ತಾಯಿಸಿ,
ಆಹೋ ರಾತ್ರಿ
ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಚಿತ್ರದುರ್ಗದ ಜಿಲ್ಲಾಧಿಕಾರಿಗಳ
ಕಚೇರಿ ಬಳಿ ಲಾರಿ ಮಾಲೀಕರುಗಳು, ವೇದಾಂತ ಮೈನಿಂಗ್
ನವರು ಅನ್ಯಾಯ ಮಾಡಿದ್ದು, ಇದರಿಂದ ಸುಮಾರು 2ಸಾವಿರ
ಕುಟುಂಬಗಳು ಬೀದಿ ಪಾಲಾಗಿವೆ.
ಕೂಡಲೇ ಜಿಲ್ಲಾಡಳಿತ ಶಾಸಕರು
ಹಾಗೂ ಸರ್ಕಾರ ಮಧ್ಯ ಪ್ರವೇಶಿಸಿ, ವೇದಾಂತ ಮೈನಿಂಗ್
ಕಂಪನಿಯಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕೆಂದು
ಒತ್ತಾಯಿಸಿದರು.