ಚಳ್ಳಕೆರೆ :
ಹಿಂದೂ ಧರ್ಮ ಮಹಾಸಾಗರವಿದ್ದಂತೆ
ಹಿಂದೂ ಧರ್ಮ ಮಹಾಸಾಗರವಿದ್ದಂತೆ ಎಂದು ಹರಿಹರದ
ವೀರಶೈವ ಪಂಚಮಸಾಲಿ, ಗುರುಪೀಠದ ವಚನಾನಂದ
ಸ್ವಾಮೀಜಿ ತಿಳಿಸಿದರು.
ಅವರು ಹೊಳಲ್ಕೆರೆಯ ಒಂಟಿ ಕಂಬದ
ಮಠದಲ್ಲಿ ನಡೆದ, ಮಲ್ಲಿಕಾರ್ಜುನ ಸ್ವಾಮೀಜಿಯ 30ನೇ ವರ್ಷದ
ಸ್ಮರಣೋತ್ಸವ, ಕಾರ್ಯಕ್ರಮದಲ್ಲಿ ಮಾತಾಡಿದರು.
ಹಿಂದೂ
ಧರ್ಮದ ಬಗ್ಗೆ ಜ್ಞಾನವಿಲ್ಲದವರು ಆ ಬಗ್ಗೆ ಹೆಚ್ಚು ಅಧ್ಯಯನ
ಮಾಡಬೇಕು. ದೇಶದಲ್ಲಿನ ಬೌದ್ಧರು, ಜೈನರು, ಲಿಂಗಾಯಿತರು,
ವೀರಶೈವರು ಎಲ್ಲರೂ ಹಿಂದುಗಳೇ ವೈದಿಕರು, ವೈದಿಕರು, ಎಲ್ಲರೂ
ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದಾರೆ ಎಂದರು.