ಚಳ್ಳಕೆರೆ :
ಚಿತ್ರದುರ್ಗದಲ್ಲಿ ಸಡಗರ ಸಂಭ್ರಮದ ನಾಗರ ಪಂಚಮಿ
ಆಚರಣೆ
ನಾಡಿನಲ್ಲೆಡೆ ಇಂದು ಶ್ರಾವಣ ಮಾಸದ ಮೊದಲ ಹಬ್ಬವಾದ
ನಾಗರಪಂಚಮಿ ಹಬ್ಬವನ್ನು, ಕೈಗಳಿಗೆ ಕಂಕಣ ಧಾರಣೆ
ಮಾಡಿಕೊಂಡು ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು.
ಚಿತ್ರದುರ್ಗದ ನಗರದೆಲ್ಲೆಡೆ ನಾಗರಕಟ್ಟೆಗಳಲ್ಲಿ ಪೂಜೆಯನ್ನು,
ಮಾಡುವ ಮೂಲಕ ಹಾಲನ್ನು ನಾಗರಕಲ್ಲುಗಳಿಗೆ ಎರೆದು
ಭಕ್ತಿಯನ್ನು ಮೆರೆದರು.
ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ
ನಾಗರಕಟ್ಟೆಗೆ ಬಂದ ಮಹಿಳೆಯರು ಮತ್ತು ಮಕ್ಕಳು ಪೂಜೆಯಲ್ಲಿ
ಪಾಲ್ಗೊಂಡಿದ್ದು ಕಂಡು ಬಂತು.