ಚಳ್ಳಕೆರೆ :

ಭಾಗವತದ ಮಹಾವಾಕ್ಯಗಳ ಸ್ಮರಣೆ ಅಗತ್ಯವಾದುದು”:- ಪೂಜ್ಯ ವೈ ರಾಜಾರಾಂ ಸದ್ಗುರುಗಳು ಅಭಿಮತ.

ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀ ಶಾರದಾಶ್ರಮದಲ್ಲಿ ಆಯೋಜಿಸಿದ್ದ ಶ್ರೀಮದ್ ಭಾಗವತ ಸಪ್ತಾಹ ಕಾರ್ಯಕ್ರಮ‌ದ ಏಳನೇ ದಿನದ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ವೈ ರಾಜಾರಾಂ ಸದ್ಗುರುಗಳು “ಭಾಗವತದ ಮಹಾವಾಕ್ಯಗಳು” ಎಂಬ ವಿಷಯವಾಗಿ ಮಾತನಾಡಿದ ಅವರು

ಭಾರತೀಯ ಸನಾತನ ಪರಂಪರೆಯು ವೇದಗಳು, ಉಪನಿಷತಗಳು, ಭಾಗವತದಂತಹ ಸದ್ಗ್ರಂಥಗಳನ್ನು ಹೊಂದಿದೆ,ಈ ಎಲ್ಲ ಪುಸ್ತಕಗಳು ನಾವು ಪ್ರತಿಯೊಬ್ಬರು ಆತ್ಮಸ್ವರೂಪ ಎಂಬ ತತ್ವವನ್ನು ಪ್ರತಿಪಾದಿಸುತ್ತೇವೆ ಎಂದು ಹೇಳಿದರು.

ಭಾಗವತದ ಮಹಾವಾಕ್ಯಗಳನ್ನು ಸಂಕ್ಷಿಪ್ತ ಉದಾಹರಣೆಗಳ ಮೂಲಕ ವಿವರಿಸಿದರು.

ಈ ವಿಶೇಷ ಸತ್ಸಂಗ ಸಭೆಯಲ್ಲಿ ಚಳ್ಳಕೆರೆ ಶ್ರೀ ಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ, ನಗರಸಭಾ ಸದಸ್ಯರಾದ ನೇತಾಜಿ ಪ್ರಸನ್ನ,ಮಾಕಂ ಶ್ರೀನಿವಾಸಲು, ರಮೇಶ್, ರವಿಚಂದ್ರ, ಯತೀಶ್ ಎಂ ಸಿದ್ದಾಪುರ,ಶಾರದಾ ಶ್ರೀನಿವಾಸ,ಕಲ್ಪನ, ವಾಸವಿ, ಗೀತಾ ವೆಂಕಟೇಶ್, ಗೀತಾ ನಾಗರಾಜ್, ಗಂಗಾಂಬಿಕೆ ರವಿ, ಯಶೋಧಾ ಪ್ರಕಾಶ್, ವನಜಾಕ್ಷಿ ಮೋಹನ್,ತಿಪ್ಪಮ್ಮ, ಭಾರತಿ,ಅಂಬುಜಾಕ್ಷಿ, ಕವಿತ, ಮಂಜುಳಮ್ಮ, ಮಾಣಿಕ್ಯ ಸತ್ಯನಾರಾಯಣ, ರಾಧಮ್ಮ,ಆಶಾ ನಾಗರಾಜ್, ಡಾ.ಭೂಮಿಕ, ಸಂತೋಷ್, ಲಕ್ಷ್ಮೀ ಚೆನ್ನಕೇಶವ,ಮಂಗಳ,ಮುಂತಾದ ಶ್ರೀಶಾರದಾಶ್ರಮದ ಸದ್ಭಕ್ತರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!