ನಿವೃತ್ತ ಯೋಧ ಕೆ.ಎಸ್. ಗಿರೀಶ್ ರವರಿಗೆ ಹೂ ಮಳೆಗೆರೆದು ಅದೂರಿ ಗ್ರಾಮಸ್ಥರು ಸ್ವಾಗತಿಸಿದರು..
ತುರುವನೂರು:: ಆಗಸ್ಟ್ 1 . ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಗಡಿಯಲ್ಲಿ ಹಗಲಿರುಳು ಸೇವೆಗೈದು ನಿವೃತ್ತಿ ಹೊಂದಿ ಸ್ವ ಗ್ರಾಮಕ್ಕೆ ಆಗಮಿಸಿದ ನಿವೃತ್ತ ಸೈನಿಕ ಕೆ.ಎಸ್. ಗಿರೀಶ್ ಅವರನ್ನು ಮೆರವಣಿಗೆ ಮೂಲಕ ಗುರುವಾರ ತುರುವನೂರು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಕೋರಿದರು.
ಯೋಧ ಗ್ರಾಮಕ್ಕೆ ಅಗಮಿಸುತ್ತಿದ್ದಂತೆ ಹೂಗಳಿಂದ ಅಲಂಕರಿಸಿದ ತೆರದ ವಾಹನದಲ್ಲಿ ಹೂಮಳೆಗೈಯುತ್ತಾ. ಪಟಾಕಿ ಸಿಡಿಸುತ್ತಾ ಡಿಜೆ ಮೇಳಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಣಿದು ಕುಪ್ಪಳಿಸಿದರು.
ದಾರಿದಕ್ಕೂ ಭಾರತ್ ಮಾತಾ ಕೀ ಜೈ ಎಂಬ ಘೋಷವಾಕ್ಯ ಮುಳುಗಿದೆ.
ನಿವೃತ್ತ ಯೋಧ ಕೆ ಎಸ್ ಗಿರೀಶ್ ಗ್ರಾಮದ ಮಹಾತ್ಮ ಗಾಂಧೀಜಿ ಪುತ್ತಳಿಗೆ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ನಿವೃತ್ತ ಯೋಧ ಕೆ.ಎಸ್.ಗಿರೀಶ್ ಭಾರತೀಯ ಅರೆಸೇನ ಪಡೆಯಲ್ಲಿ 21 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಯೋಧನಿಗೆ ಗ್ರಾಮಸ್ಥರು ಅದ್ದೂರಿಯಾಗಿ ಮೆರವಣಿಗೆ ಮೂಲಕ ಸ್ವಾಗತಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಅರಸೇನಾ ಪಡೆ ಸಂಘದ ಜಿಲ್ಲಾಧ್ಯಕ್ಷ ಜಿಲ್ಲಾ ಉಪಾಧ್ಯಕ್ಷ ಡಿ. ಜಯಣ್ಣ ಪ್ರಧಾನ ಕಾರ್ಯದರ್ಶಿ ವಿ. ರವಿಶಂಕರ್, ಸದಸ್ಯರಾದ ರುದ್ರಮುನಿ, ಹಾಲೇಶ್ ಕಲ್ಲಹಳ್ಳಿ, ಬಸವರಾಜ್, ಓ.ಜಯಣ್ಣ ಕೂನಬೇವು, ಅಲಿಫ್ ಖಾನ್, ರಾಘವೇಂದ್ರ, ಡಿ.ಎನ್. ತಿಪ್ಪೇಸ್ವಾಮಿ, ಗ್ರಾಮದ ಮುಖಂಡ ಕಾಕಿ ಹನುಮಂತಪ್ಪ, ಸಮಸ್ತ ತುರುವನೂರು ಗ್ರಾಮಸ್ಥರು ಇದ್ದರು