ಕಾವಲು ಬಸವೇಶ್ವರ ನಗರ ಗ್ರಾಮಸ್ಥರಿಂದ ವರ್ಗಾವಣೆ ರದ್ದುಗೊಳಿಸಲು ಆಗ್ರಹ
ಶಿಕ್ಷಕರ ವರ್ಗಾವಣೆ ಖಂಡಿಸಿ ಪ್ರತಿಭಟನೆ
ನಾಯಕನಹಟ್ಟಿ : ಹಲವು ವರ್ಷಗಳಿಂದ ಮಕ್ಕಳ ಕಲಿಕೆಗೆ ಪೂರಕ ವಾತವರಣ ನಿರ್ಮಿಸಿ ಮಕ್ಕಳ ಸ್ನೇಹಿಯಾಗಿದ್ದ ಶಿಕ್ಷಕರೊಬ್ಬರನ್ನು ವರ್ಗಾವಣೆ ಮಾಡಿರುವ ಕ್ರಮವನ್ನು ಖಂಡಿಸಿ ಕಾವಲು ಬಸವೇಶ್ವರ ನಗರದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಪಟ್ಟಣದ ವ್ಯಾಪ್ತಿಯ ಕಾವಲು ಬಸವೇಶ್ವರ ನಗರದ ಗ್ರಾಮಸ್ಥರು ಗುರುವಾರ ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.
ನಾಯಕನಹಟ್ಟಿ ಸಮೀಪದ ಕಾವಲು ಬಸವೇಶ್ವರ ನಗರದಲ್ಲಿ ಕಿರಿಯ ಪ್ರಾಥಮಿಕ ಶಾಲೆಯಿದ್ದು, ಇಲ್ಲಿ ಒಂದರಿಂದ ಐದನೇ ತರಗತಿಯ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಈ ಶಾಲೆಯು 1997ರಲ್ಲಿ ಸ್ಥಾಪನೆಯಾಗಿದ್ದು, ಕೇವಲ ಒಂದು ಕೊಠಡಿಯಲ್ಲಿ ಶಾಲೆ ಆರಂಭವಾಯಿತು. ಇಂದು ಶಾಲೆಯಲ್ಲಿ ನಾಲ್ಕು ತರಗತಿಗಳು ತರಗತಿ ಕೊಠಡಿಗಳು, ಒಂದು ಅಡುಗೆ ಕೋಣೆ ಶೌಚಾಲಯ ಸೇರಿದಂತೆ ಹಲವು ಮೂಲ ಸೌಕರ್ಯಗಳನ್ನು ಸುಸಜ್ಜಿತವಾಗಿ ಹೊಂದಿದೆ ಜೊತೆಗೆ ಶಾಲೆಯ ಆವರಣವು ವಿಶಾಲವಾಗಿದ್ದು ಶಾಲೆಯ ಕಟ್ಟಡವನ್ನು ಮೀರಿಸಿ ಎತ್ತರದ ಗಿಡಮರಗಳು ಶಾಲೆಯ ಆವರಣದಲ್ಲಿ ಬೆಳೆದಿವೆ ಒಟ್ಟಾರೆಯಾಗಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶಾಲೆಯಲ್ಲಿ ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಏಕೈಕ ಶಿಕ್ಷಕ ಸಿ.ಲೋಕೇಶ್.
ಇವರು ಮನೆಮನೆಗೆ ತೆರಳಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತಂದು ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದ್ದರು ಈ ಪುಟ್ಟ ಗ್ರಾಮದಲ್ಲಿ ಎಲ್ಲಾ ಪೋಷಕರ ಮತ್ತು ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಸಿ ಲೋಕೇಶ್ ಹೆಸರುವಾಸಿಯಾಗಿದ್ದರು.
ಹಲವು ವರ್ಷಗಳಿಂದ ವಿದ್ಯಾರ್ಥಿನಿಯಾಗಿ ಶಾಲೆಯ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಉತ್ತಮವಾದ ಕೊಡುಗೆಯನ್ನು ನೀಡಿದ್ದರು ಇಂತಹ ಶಿಕ್ಷಕರನ್ನು ರಕ್ಷಣೆ ಇಲಾಖೆಯು ಈಚೆಗೆ ನಡೆದ ಸಾಮಾನ್ಯ ವರ್ಗಾವಣೆಯಲ್ಲಿ ಅವರನ್ನು ಕಾವಲುಬಸವೇಶ್ವರ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿಂದ ಬೇರಡೆಗೆ ವರ್ಗಾವಣೆಗೊಳಿಸಿದೆ ಇದರಿಂದ ಮಕ್ಕಳು ಮತ್ತು ಪೋಷಕರಿಗೆ ಬಹುದೊಡ್ಡ ಆಘಾತ ಎದುರಾಗಿದೆ
ಶಿಕ್ಷಕ ಸಿ ಲೋಕೇಶ್ ಅವರ ವರ್ಗಾವಣೆಯಿಂದ ಮಕ್ಕಳು ನೊಂದಿದ್ದಾರೆ ಹಾಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಶಿಕ್ಷಕ ಸಿ ಲೋಕೇಶ್ ಅವರ ವರ್ಗಾವಣೆಯನ್ನು ರದ್ದುಗೊಳಿಸಿ ಅವರನ್ನು ಇದೇ ಶಾಲೆಯಲ್ಲಿ ಮುಂದುವರಿಸಬೇಕೆಂದು ಒತ್ತಾಯಿಸುತ್ತಿದ್ದೇವೆ
ಒಂದು ವೇಳೆ ಅವರ ವರ್ಗಾವಣೆಯನ್ನು ಅಧಿಕೃತಗೊಳಿಸಿದರೆ ಮುಂಬರುವ ದಿನಗಳಲ್ಲಿ ಶಾಲೆಗೆ ಬೀಗ ಜಡಿದು, ಉಗ್ರ ಸ್ವರೂಪದ ಪ್ರತಿಭಟನೆಯನ್ನು ಗ್ರಾಮಸ್ಥರಾದ ನಾವುಗಳು ಹಮ್ಮಿಕೊಳ್ಳುತ್ತೇವೆ ಎಂದು ಸಣ್ಣಬೋರಯ್ಯ, ಮಾರಣ್ಣ, ತಿಪ್ಪೇಸ್ವಾಮಿ, ಬಸಯ್ಯ, ಬೈಯ್ಯಣ್ಣ, ವೆಂಕಟೇಶ್, ಮಾರಕ್ಕ, ‘ನಾಗಮ್ಮ’, ರುದ್ರಮ್ಮ, ಪಾಲಮ್ಮ, ನೀಲಮ್ಮ, ಶಾರದಮ್ಮ, ರಾಯಮ್ಮ, ಚಿನ್ನಮ್ಮ, ಸಣ್ಣಕ್ಕ, ತಿಪ್ಪಮ್ಮ, ಬೋರಮ್ಮ, ಓಬಮ್ಮ, ಸೂರಮ್ಮ, ಶಿಲ್ಪಮ್ಮ, ಬೋಸಮ್ಮ, ಕುಂಟೋಬಯ್ಯ, ಟಿ.ಒ.ತಿಪ್ಪೇಸ್ವಾಮಿ, ಸುರೇಶ, ಮಹೇಶ, ಪೂಜಾರಿ ನಾಗರಾಜ, ಮಂಜುನಾಥ,ನಾಗವೇಣಿ. ಒತ್ತಾಯಿಸಿದರು.