ಪ್ರತಿಯೊಬ್ಬರೂ ವೃಕ್ಷ ಪ್ರೀತಿ ಬೆಳೆಸಿಕೊಳ್ಳಬೇಕು ಎಸ್ ಡಿಎಂಸಿ ಅಧ್ಯಕ್ಷ ಪೂರ್ಣ ಓಬಯ್ಯ.
ನಾಯಕನಹಟ್ಟಿ:: ಅರಣ್ಯಕ್ಕೆ ದೊಡ್ಡ ಶತ್ರುವೆಂದರೆ ಮನುಷ್ಯನೆ ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ಪೂರ್ಣ ಓಬಯ್ಯ ಹೇಳಿದ್ದಾರೆ.
ಗುರುವಾರ ಹೋಬಳಿಯ ನಲಗೇತನಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ) ಜ್ಞಾನ ವಿಕಾಸ ಯೋಜನೆಯಡಿ ಪರಿಸರ ಮಾಹಿತಿ ಕಾರ್ಯಕ್ರಮವನ್ನು ಸಸಿಗೆ ನೀರಿರದು ಉದ್ಘಾಟಿಸಿ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ವಿವಿಧ ಕಾರ್ಯಕ್ರಮಗಳ ಮೂಲಕ ಜನರ ಹೇಳಿಗೆಯ ಮೂಲಕ ದೇಶದ ಉನ್ನತಿ ಕಾರ್ಯವನ್ನು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ ಆದ್ದರಿಂದ ಗ್ರಾಮದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತ ಗಿಡಗಳನ್ನ ಬೆಳೆಸಬೇಕು ಪರಿಸರ ಕಾಪಾಡದಿದ್ದರೆ ಮುಂದೆ ಅಪಾಯ ತಪ್ಪಿದ್ದಲ್ಲ ಎಂದರು.
ಇನ್ನೂ ಶಾಲೆಯ ಮುಖ್ಯ ಶಿಕ್ಷಕ ಬಿ.ವಿಶ್ವನಾಥ್ ಮಾತನಾಡಿದರು. ಬಯಲು ಸೀಮೆಯ ಬರದ ನಾಡಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಪರಿಸರವನ್ನು ಉಳಿಸಲು ಮತ್ತು ಸಂರಕ್ಷಿಸಲು ಪ್ರತಿ ಗ್ರಾಮಗಳಲ್ಲಿ ಮತ್ತು ಶಾಲೆಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಗಳನ್ನು ರೂಪಿಸಿರುವುದು ಶ್ಲಾಘನೆಯ ಎಂದರು.
ಇದೇ ಸಂದರ್ಭದಲ್ಲಿ ಊರಿನ ಮುಖಂಡರಾದ ಜಿ ಸಿ ಗೌಡ್ರು ಬೋರಯ್ಯ, ಹರೀಶ್, ಮನುಮೈನಹಟ್ಟಿ ವಲಯ ಮೇಲ್ವಿಚಾರಕಿ ಶ್ರೀಮತಿ ಜಯಶ್ರೀ, ಶಿಕ್ಷಕರಾದ ಸತೀಶ್ ಬಾಬು, ಶಿಕ್ಷಕಿ ಜ್ಯೋತಿ, ಸುಧಾ, ಅತಿಥಿ ಶಿಕ್ಷಕಿ ಬೋರಮ್ಮ, ಸೇವಾ ಪ್ರತಿನಿಧಿಗಳಾದ ಶ್ರೀಮತಿ ನೇತ್ರಮ್ಮ, ಗಾಯತ್ರಿ ,ನಾಗರತ್ನ, ಸೇರಿದಂತೆ ಶಾಲೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು