ನಾಯಕನಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ನಾಲ್ಕು ಡೆಂಘೀ ಪ್ರಕರಣಗಳು ಪತ್ತೆ.
ನಾಯಕನಹಟ್ಟಿ:: ಆಗಸ್ಟ್ 1. ಪಟ್ಟಣಕ್ಕೆ ಹೊಕ್ಕರಿಸಿಕೊಂಡ ಡೆಂಘೀ ನಾಲ್ಕು ಪ್ರಕರಣಗಳು ಪತ್ತೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು.
ಹೌದು ಇದು ನಾಯಕನಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ನಾಲ್ಕು ಡೆಂಘೀ ಪ್ರಕರಣಗಳು ಪತ್ತೆಯಾಗಿವೆ.
ಗುರುವಾರ ಬೆಳಿಗ್ಗೆ ಏಳನೇ ವಾರ್ಡಿನಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಸ್ವಚ್ಛತೆ ಮತ್ತು ಬೀಚಿಂಗ್ ಪೌಡರ್ ಸಿಂಪಡಿಸಲಾಯಿತು.
ಇದು ವೇಳೆ ಪಟ್ಟಣ ಪಂಚಾಯತಿ ದ್ವಿತೀಯ ದರ್ಜೆ ಸಹಾಯಕ ಸುರೇಶ್ ಮಾತನಾಡಿದರು. ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಯಾರಿಗಾದರೂ ಚಳಿ, ಜ್ವರ ಕಾಣಿಸಿಕೊಂಡರೆ ನಿರ್ಲಕ್ಷ್ಯ ವಹಿಸದೆ ತಕ್ಷಣ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿ ನಮ್ಮ ಪಟ್ಟಣ ಪಂಚಾಯತಿ ವತಿಯಿಂದ ಪ್ರತಿ ದಿನ ಕಸ ವಿಲೇವಾರಿ ವಾಹನ ಬರುತ್ತದೆ ಅದಕ್ಕೆ ತಮ್ಮ ಮನೆಯ ಸುತ್ತ ಮುತ್ತ ಕಸವನ್ನು ಹಾಕಿ ಮತ್ತು ಪ್ರತಿದಿನ ಶುದ್ಧ ನೀರು ಹಾಗೂ ಉತ್ತಮ ಆಹಾರವನ್ನು ಸೇವಿಸಿ ಎಂದು ಅಲ್ಲಿನ ನಿವಾಸಿಗಳಿಗೆ ಜಾಗೃತಿ ಮೂಡಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ಏಳನೇ ವಾರ್ಡಿನ ನಿವಾಸಿ ಎಸ್ ಟಿ ತಿಪ್ಪೇಸ್ವಾಮಿ. ಹಾಗೂ ಪೌರಕಾರ್ಮಿಕರಾದ ಜಾಗನೂರಹಟ್ಟಿ ತಿಪ್ಪೇಸ್ವಾಮಿ, ದುರುಗೇಶ್, ತಿಪ್ಪೇಸ್ವಾಮಿ, ಬಂಗಾರಿ ,ಗುರುಸ್ವಾಮಿ, ರುದ್ರಪ್ಪ, ತಿಪ್ಪೇಸ್ವಾಮಿ, ಶಿವರುದ್ರಪ್ಪ, ಗೋಣೆಪ್ಪ, ಇದ್ದರು