ಮಡಿಲು ಸಂಸ್ಥೆ ವತಿಯಿಂದ ಡೆಂಗ್ಯೂ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಜಾಥಕ್ಕೆ ಚಾಲನೆ

ಮಳೆಗಾಲದಲ್ಲಿ ಡೆಂಗ್ಯೂ ಪ್ರಕರಣಕ್ಕೆ ಬ್ರೇಕ್ ಹಾಕಿ

ಡೆಂಗ್ಯೂ ನಿಯಂತ್ರಿಸದಿದ್ದರೆ ಸಮಸ್ಯೆಗೆ ಎದುರಿಸಬೇಕಾಗುತ್ತದೆ: ಶಿಕ್ಷಕ ಮಲ್ಲಿಕಾರ್ಜುನ ಸ್ವಾಮಿ ಕಳವಳ

ಸಿರಿಗೆರೆ

ಚಿತ್ರದುರ್ಗ: ಮಳೆಗಾಲದಲ್ಲಿ ಎಲ್ಲರಿಗೂ ಕಾಟ ಕೊಡುವ ಡೆಂಗ್ಯೂಯನ್ನ ನಾವು ನಿಯಂತ್ರಿಸದಿದ್ದರೆ ಸಮಸ್ಯೆಗಳನ್ನು ಎದುರಿಸಬೇಕಾದಂತ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಲ್ಲಿಕಾರ್ಜುನ ಸ್ವಾಮಿ ಅವರು ತಿಳಿಸಿದರು.

ಸಿರಿಗೆರೆ ಸಮೀಪದ ಅಳಗವಾಡಿ ಗ್ರಾಮದಲ್ಲಿ ಶನಿವಾರ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಾಯದೊಂದಿಗೆ ಡೆಂಗ್ಯೂ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಅರಿವು ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು, ಮಳೆಗಾಲದಲ್ಲಿ ಸಾಕಷ್ಟು ಮನೆಯ ಸುತ್ತಮುತ್ತ ಹಸಿರು ಸಸ್ಯಗಳು ಬೆಳೆಯುತ್ತಿದ್ದು ಇವುಗಳನ್ನ ನಾವು ನಾಶಪಡಿಸದಿದ್ದರೆ ಸೊಳ್ಳೆಗಳ ಉತ್ಪತ್ತಿಗೆ ನಾವೇ ಕಾರಣ ಮಾಡಿ ಕೊಟ್ಟಂತಾಗುತ್ತದೆ ಹಾಗಾಗಿ ಮನೆಯ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಆಗ ಮಾತ್ರ ಡೆಂಗ್ಯೂಯನ್ನು ನಿಯಂತ್ರಿಸಲು ಸಾಧ್ಯ ಎಂದರು.

ಮನೆಯ ಸುತ್ತಮುತ್ತ ತ್ಯಾಜ್ಯ ವಸ್ತುಗಳು ಶೇಖರಣೆ ಮಾಡದಂತೆ ಹಾಗೂ ತೆಂಗಿನ ಚಿಪ್ಪು ಟೈಯರ್ ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಇದರ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸಿ ಡೆಂಗ್ಯೂಯನ್ನು ನಿಯಂತ್ರಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು

ಡೆಂಗ್ಯೂ ಒಮ್ಮೆ ಬಂದರೆ ಆರೋಗ್ಯದಲ್ಲಿ ಚೇತರಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡಬೇಕಾಗುತ್ತದೆ ಹಾಗಾಗಿ ವಿದ್ಯಾರ್ಥಿಗಳು ಮನೆಯ ತೊಟ್ಟಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ನೀರು ನಿಲ್ಲುವಂತಹ ಜಾಗಗಳನ್ನು ಗುರುತಿಸಿ ನಾವು ಸ್ವಚ್ಛತೆಗೊಳಿಸುವುದರ ಮೂಲಕ ಡೆಂಗ್ಯೂ ಹರಡುವಂತಹ ಸೊಳ್ಳೆಯನ್ನ ನಿಯಂತ್ರಿಸಬಹುದು ಎಂದು ತಿಳಿಸಿದರು.

ಮಡಿಲ ಸಂಸ್ಥೆಯ ಅಧ್ಯಕ್ಷರಾದ ಕುಮಾರಸ್ವಾಮಿ ಹೆಚ್ ಮಾತನಾಡಿ ಡೆಂಗ್ಯೂಯನ್ನು ನಿಯಂತ್ರಿಸಲು ನಮ್ಮ ಮನೆಯಲ್ಲಿ ನಾವು ಕೆಲವೊಂದಿಷ್ಟು ಉಪಯೋಗಗಳನ್ನು ಕಂಡುಕೊಳ್ಳಬಹುದು ಅಸೇ ರೀತಿ ಬೇವಿನ ಸೊಪ್ಪಿನ ಹೊಗೆಯನ್ನ ಮನೆಯಲ್ಲಿ ಹಾಕಬೇಕು ಆಗ ಸೊಳ್ಳೆಗಳು ಸಾಯುತ್ತವೆ. ಜೊತೆಗೆ ರಾತ್ರಿಯ ವೇಳೆ ಮಲಗುವ ಸಂದರ್ಭದಲ್ಲಿ ಸೊಳ್ಳೆ ಪರದೆಗಳನ್ನ ಬಳಸಿದಾಗ ಮಾತ್ರ ಡೆಂಗ್ಯೂಯಿಂದ ನಾವು ರಕ್ಷಿಸಿಕೊಳ್ಳಬಹುದು ಎಂದರು.

ಇಂದಿನ ಕಾಲದಲ್ಲಿ ಸೊಳ್ಳೆಗಳನ್ನು ಓಡಿಸುವುದಕ್ಕೆ ಹೊಂಗೆ ಸೊಪ್ಪು, ಚೆಂಡು ಹೂ ಗಳನ್ನ ಸಗಣಿಯಲ್ಲಿ ಬೆರೆಸಿ ಬೆರಣಿತಟ್ಟಿ ಅವುಗಳನ್ನು ಒಣಗಿಸಿ ಸಂಜೆಯ ವೇಳೆ ಮನೆಯ ಅಂಗಳದಲ್ಲಿ ಅವುಗಳನ್ನು ಹಚ್ಚಿ ಇಡುತ್ತಿದ್ದರು ಆಗ ಸೊಳ್ಳೆಗಳು ಆ ಹೊಗೆಗೆ ಸತ್ತು ಹೋಗುತ್ತಿದ್ದವು ಇಂತಹ ಮನೆ ಮದ್ದುಗಳನ್ನು ನಾವು ಉಪಯೋಗಿಸಿದರೆ ಸೊಳ್ಳೆಗಳ ನಿಯಂತ್ರಣವನ್ನು ನಾವು ಮಾಡಬಹುದಾಗಿದೆ ಎಂದು ಹೇಳಿದರು.

ಶಾಲೆಯ ಹಳೆ ವಿದ್ಯಾರ್ಥಿ ಅನಿಲ್ ಜಂಬೆ ಮಾತನಾಡಿ ಮಡಿಲು ಸಂಸ್ಥೆ ವತಿಯಿಂದ ಸಾಕಷ್ಟು ಸಾಮಾಜಿಕ ಸೇವೆಗಳನ್ನ ಜಿಲ್ಲೆಯಾದ್ಯಂತ ಮಾಡುತ್ತಲೇ ಬರುತ್ತಿದ್ದಾರೆ. ಪರಿಸರ ಜಾಗೃತಿ,ಆರೋಗ್ಯ ತಪಾಸಣೆ, ಸ್ವಚ್ಛತೆ ಅರಿವು, ಕಾನೂನು ಅರಿವು-ನೆರವು ಇದೇ ರೀತಿ ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತಾ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುತ್ತಾ ಬರುತ್ತಿದ್ದಾರೆ. ಅಳಗವಾಡಿ ಗ್ರಾಮದಲ್ಲಿ ಡೆಂಗ್ಯೂ ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಜಾಥವನ್ನು ಮಾಡುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ತಿಳಿಸಿದರು.

ಶಾಲೆಯ ಆವರಣದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಡೆಂಗ್ಯೂ ನಿಯಂತ್ರಿಸುವ ಬಿತ್ತಿ ಚಿತ್ರಗಳನ್ನು ಪ್ರದರ್ಶಿಸುವುದರ ಮೂಲಕ ಜಾಥವನ್ನು ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ನಾರಪ್ಪ, ಸಹ ಶಿಕ್ಷಕರಾದ ಶಿವಮೂರ್ತಿ, ಹೈದರಾಲಿ, ಸಂಧ್ಯಾ, ಮಡಿಲ ಸಂಸ್ಥೆ ಕಾರ್ಯದರ್ಶಿ ಆನಂದಪ್ಪ.ಡಿ ಸದಸ್ಯರುಗಳಾದ ಪ್ರದೀಪ್, ಪ್ರವೀಣ್, ಸುಮನ್, ರಾಘವೇಂದ್ರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು.

Namma Challakere Local News
error: Content is protected !!