“ಚಳ್ಳಕೆರೆಯ ಶ್ರೀ ಶಾರದಾಶ್ರಮದಲ್ಲಿ ಎಸ್.ಆರ್.ಎಸ್. ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ನಿರ್ಮಾಣಕಾರಿ ಕಾರ್ಯಕ್ರಮ”.

ಚಳ್ಳಕೆರೆ:- ನಗರದ ವಾಸವಿ ಕಾಲೋನಿಯಲ್ಲಿರುವ ಶ್ರೀ ಶಾರದಾಶ್ರಮದಲ್ಲಿ ಎಸ್.ಆರ್.ಎಸ್. ಪ್ರೌಢಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಎರಡು ದಿನಗಳ “ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಆರಂಭದಲ್ಲಿ ಯತೀಶ್.ಎಂ. ಸಿದ್ದಾಪುರ ಅವರು ಸುಮಧುರ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬಾಪೂಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜಪ್ಪ ಅವರು ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ಕಿವಿಮಾತು ಹೇಳಿದರು.

ಎಸ್.ಆರ್.ಎಸ್.ಪ್ರೌಢಶಾಲೆಯ ಪ್ರಾಂಶುಪಾಲರಾದ ವಿಜಯ ವಿದ್ಯಾರ್ಥಿ ಜೀವನದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ವಿದ್ಯಾರ್ಥಿಗಳಿಗೆ ಧ್ಯಾನ ಮಾಡುವ ವಿಧಾನವನ್ನು ತಿಳಿಸುತ್ತ ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಹಲವಾರು ಕಥೆಗಳ ರೂಪದಲ್ಲಿ ತಿಳಿಯಪಡಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಮಾಣಿಕ್ಯ ಸತ್ಯನಾರಾಯಣ,ದೀಪ ರಾಘವೇಂದ್ರ,ಯತೀಶ್.ಎಂ.ಸಿದ್ದಾಪುರ, ರಶ್ಮಿ,ಡಾ.ಭೂಮಿಕಾ, ಚೆನ್ನಕೇಶವ ಚೇತನ್,ಸಂತೋಷ್,ಶ್ರೀಮುಖ್, ರೂಪಗಿರೀಶ್, ಎಸ್.ಆರ್.ಎಸ್.ಶಾಲೆಯ ಶಿಕ್ಷಕರು ಭಾಗವಹಿಸಿದ್ದರು.

Namma Challakere Local News

You missed

error: Content is protected !!