ಚಳ್ಳಕೆರೆ : ಮನೆಯ ಕಸ ರಸ್ತೆಗೆ ಎಸೆದ ಮಾಲೀಕರು..!
ರಸ್ತೆಗೆ ಎಸೆದ ಕಸವನ್ನು ಮತ್ತೆ ಮನೆಗೆ ಮರುಕಳಿಸಿದ ನಗರಸಭೆ ಅಧಿಕಾರಿಗಳು..!!
ಹೌದು ಈ ಘಟನೆ ಚಳ್ಳಕೆರೆ ನಗರದ ವಾಲ್ಮೀಕಿ ನಗರದಲ್ಲಿ ನಡೆದಿದೆ.
ದಿನ ನಿತ್ಯೂ ನಗರದ ಸ್ವಚ್ಚತೆಗೆ ಮುಂದಾದ ಪೌರಕಾರ್ಮಿಕರು ಸೇವೆ ಅನನ್ಯ ಅದರೆ ಇಂತ ಮನೆಗಳಿಂದ ನಗರ ಸ್ವಚ್ಚತೆಯಿಲ್ಲದೆ ಅದಗೆಡುತ್ತಿದೆ ಆದ್ದರಿಂದ ಇಂತಹ ಪ್ರಕರಣಗಳು ಮತ್ತೆ ಮರುಗಳಿಸದಂತೆ ಮನೆಯ ಮಾಲೀಕರಿಗೆ ಧಂಡವನ್ನು ಕೂಡ ಹಾಕಿದ್ದೆವೆ ಎಂದು ನಗರಸಭೆ ಪೌರಾಯುಕ್ತೆ ಪಿ.ಲೀಲಾವತಿ ಹೇಳಿದ್ದಾರೆ.
ಕಾರಿನಲ್ಲಿ ಮನೆಯ ಕಸವನ್ನ್ಳು ತುಂಬಿಕೊಡು ಹೋಗಿ ರಸ್ತೆ ಪಕ್ಕಕ್ಕೆ ಸುರಿಯುತ್ತಿರುವ ಮಾಲೀಕರನ್ನು ರೆಡ್ ಹ್ಯಾಂಡ್ ಹಾಗಿ ಹಿಡಿದ ನಗರಸಭೆ ಅಧಿಕಾರಿಗಳು ರಸ್ತೆಗೆ ಸುರಿದ ಕಸವನ್ನು ಮತ್ತೆ ಮನೆಗೆ ತಂದು ಹಾಕಿ ಬುದ್ದಿವಾದ ಹೇಳಿ ಧಂಡವನ್ನು ಹಾಕಿದ್ದಾರೆ.
ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಪೌರಾಯುಕ್ತೆ ಪಿ.ಲೀಲಾವತಿ , ಪ್ರತಿ ವಾರ್ಡ್ನಲ್ಲಿ ಪ್ರತಿನಿತ್ಯವೂ ಕಸದ ವಾಹನಗಳು ಮನೆಗಳ ಮುಂದೆ ಬರುತ್ತಿವೆ ಆದರೂ ಸಹ ಮನೆಯಲ್ಲಿನ ಕಸವನ್ನು ಚರಂಡಿ, ರಸ್ತೆಯಲ್ಲಿ ಹಾಕುವುದರಿಂದ ಮಳೆ ಬಂದ ಸಂಧರ್ಭದಲ್ಲಿ ಅದು ಚಂರಡಿ ಸೇರೆ ಮತ್ತೆ ಮೋರಿ ನೀರು ಹೊರ ಬಂದು ರಸ್ತೆಗೆ ಅಡಚಣೆ ಉಂಟಾಗುತ್ತದೆ ಇಷ್ಟೆಲ್ಲ ಕಾರಣಕ್ಕೆ ಮನೆಗಳ ಕಸವೆ ಕಾರಣವಾಗಿದೆ. ಆದ್ದರಿಂದ ಇನ್ನೂ ಮುಂದೆ ಮನೆಯಲ್ಲಿನ ಕಸವನ್ನು ರಸ್ತೆ ಚರಂಡಿ ಹಾಗೂ ಖಾಲಿ ನಿವೇಶದಲ್ಲಿ ಸುರಿದರೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ,
ಈ ಸಂದರ್ಭದಲ್ಲಿ ನಗರಸಭೆ ಹಿರಿಯ ಆರೋಗ್ಯಾಧಿಕಾರಿ ಮಹಾಲಿಂಗಪ್ಪ, ತಿಪ್ಪೆಸ್ವಾಮಿ, ಹಾಗೂ ಸ್ವಚ್ಚತಾ ಸಿಬ್ಬಂದಿಗಳು ಉಪಸ್ಥಿತರಿದ್ದರು.