filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (0.41968238, 0.42075893);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;

ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯತಿಯ ಭ್ರಷ್ಟಾಚಾರ ಆರೋಪ ಹೊತ್ತಿರುವ ಎಲ್ಲಾ ಪಿಡಿಒಗಳ ವಿರುದ್ಧ ತನಿಖೆ ನಡೆಯಲಿ; ಸದಸ್ಯ ರಾಜಣ್ಣ ಒತ್ತಾಯ

ಚಳ್ಳಕೆರೆ: ಕಳೆದ ಕೆಲ ದಿನಗಳ ಹಿಂದೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ವೇದವ್ಯಾಸಲು ವಿರುದ್ಧ 21 ಲಕ್ಷದ ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಗಂಭೀರ ಆರೋಪವನ್ನು ಗ್ರಾಮ ಪಂಚಾಯತಿ ಸದಸ್ಯರು ಮಾಡಿದ್ದರು. 

ಈಗ ಗ್ರಾಮ ಪಂಚಾಯಿತಿ ಸದಸ್ಯರ ಮತ್ತೊಂದು ಗುಂಪು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿಯ 2021ರಿಂದ 24ರ ವರೆಗೆ ನಾಲ್ಕು ಜನ ಪಿಡಿಒಗಳಾದ ಮೋಹನ್ ದಾಸ, ಪಾಲಯ್ಯ, ಮಾಲತೇಶ್ ,ವೇದ ವ್ಯಾಸಲು, ಸೇರಿದಂತೆ ಎಲ್ಲ ಪಿಡಿಒಗಳು ಬ್ರಷ್ಟಾಚಾರ ಹಗರಣಗಳಲ್ಲಿ ಸಿಲುಕಿ ಈಗಾಗಲೇ ಕೆಲವರು ತನಿಖೆ ಎದುರಿಸಿ ಅಮಾನತ್ತು ಶಿಕ್ಷೆಗೆ ಒಳಗಾಗಿದ್ದರು. ಆದರೂ ಬುದ್ದಿ ಕಲಿಯದೆ ಮತ್ತೆ ಭ್ರಷ್ಟಾಚಾರ ಹಗರಣಗಳು ಗ್ರಾಮ ಪಂಚಾಯತಿಯಲ್ಲಿ ಪದೇ ಪದೇ ಕೇಳಿ ಬರುತ್ತಿದ್ದು.

ಈ ಹಿಂದಿನ ಅಧ್ಯಕ್ಷರುಗಳು ಸಹ ಇದರಲ್ಲಿ ಪಾಲುದಾರಿಕೆ ಹೊಂದಿದ್ದಾರೆ ಇದರಿಂದಾಗಿ ಗ್ರಾಮದಲ್ಲಿ ಯಾವುದೇ ರೀತಿಯ ಅಭಿವೃದ್ಧಿಯಾಗಿಲ್ಲ ಎಂದು ಗ್ರಾಮ ಪಂಚಾಯತಿ ಸದಸ್ಯ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಮತ್ತೊಬ್ಬ ಗ್ರಾಮ ಪಂಚಾಯಿತಿ ಸದಸ್ಯ ಮಹಾಂತೇಶ್ ಮಾತನಾಡಿ, ಕಳೆದ ದಿನಗಳಲ್ಲಿ ಸರಕಾರದ ಮಹತ್ವ ಯೋಜನೆಯಾದ ಗ್ರಾಮ ವಿಕಾಸ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇನ್ನೂ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಗ್ರಾಮದಲ್ಲಿ ಆಗಬೇಕಾಗಿರುವ ಚರಂಡಿ, ರಸ್ತೆ, ಕುಡಿಯುವ, ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಗುತ್ತಿಗೆದಾರರಿಗೂ ಬಿಲ್ ಪಾವತಿಸದೆ ವಂಚನೆ ಮಾಡಿರುವುದಲ್ಲದೆ ಗ್ರಾಮ ಪಂಚಾಯಿತಿ ಸದಸ್ಯರ ಸುಮಾರು 84,000 ಗೌರವ ಧನವನ್ನು ಸಹ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು ಕೂಡಲೇ ಜಿಲ್ಲಾ ಹಾಗೂ ತಾಲೂಕು ಉನ್ನತ ಮಟ್ಟದ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜ್. ರಾಜು, ಮನೋಹರ, ರಾಮಲಿಂಗಪ್ಪ, ಬೊಮ್ಮಯ್ಯ, ಹರೀಶ್ ರೆಡ್ಡಿ, ಪ್ರಕಾಶ್, ಗ್ರಾಮಸ್ಥರಾದ ರಾಮಣ್ಣ, ನಾಗರಾಜ್, ಪ್ರತಾಪ್, ಚಿತ್ತಪ್ಪ, ರಾಮಣ್ಣ, ಬಸವರಾಜ್, ಸೇರಿದಂತೆ ಅನೇಕ ಗ್ರಾಮಸ್ಥರು ಇದ್ದರು.

About The Author

Namma Challakere Local News
error: Content is protected !!