ಚಳ್ಳಕೆರೆ : ಮನುಷ್ಯ ಬದುಕಿದ್ದಾಗ ಕುಟುಂಬದ ಆಧಾರ ಸ್ತಂಭ ಯಾವ ರೀತಿಯೋ ಅದೇ ರೀತಿಯಲ್ಲಿ ಅವರು ಇಲ್ಲದಾಗ ಕುಟುಂಬದ ಆಧಾರ ಸ್ತಂಭದಂತೆ ಪಿಎನ್‌ಬಿ ಮೆಟ್ ಲೈಫ್ ಇನ್ಯೂರೇನ್ಸ್ ಸಹಾಯವಾಗಲಿದೆ ಎಂದು ಕರ್ನಾಟಕ ಬ್ಯಾಂಕ್ ಚೀಪ್ ಮ್ಯಾನೇಜರ್ ಸುದಿಂದ್ರ ಪಂಚಮುಖಿ ಹೇಳಿದರು.
ಅವರು ನಗರದ ಬಳ್ಳಾರಿ ರಸ್ತೆಯ ಕರ್ನಾಟಕ ಬ್ಯಾಂಕ್ ನಲ್ಲಿ ಪಿಎನ್‌ಬಿ ಮೆಟ್ ಲೈಫ್ ಮೇರೆಟರ್ ಇನ್ಯೂರೇನ್ಸ್ ಪ್ರೀಯಂ ಮೊತ್ತದ ಸುಮಾರು ಐವತ್ತು ಲಕ್ಷ ರೂ.ಗಳ ಚೆಕ್ ನ್ನು ದಿ.ಶಿವಕುಮಾರ್ ಪತ್ನಿ ಮಹಾಲಕ್ಷ್ಮಿ ಗೆ ಹಸ್ತಾಂತರ ಮಾಡಿ ನಂತರ ಮಾತನಾಡಿದರು,
ಕುಟುಂಬಕ್ಕೆ ಆಸರೆಯಾಗಿದ್ದ ಮನೆಯ ಯಜಮಾನ ಅಪಘಾತಕ್ಕೆ ತುತ್ತಾದಾಗ ಆ ಕುಟುಂಬದ ಸ್ಥಿತಿ ಹೇಳತೀರದು ಆದ್ದರಿಂದ ತಾವು ಸೇವಾ ದಿನಗಳಲ್ಲಿ ಕುಟುಂಬಕ್ಕೆ ಆಸರೆಯಾಗುವಂತ ಇನ್ಯೂರೇನ್ಸ್ ಪ್ರೀಯಂ ಸೇವೆಗಳು ಕರ್ನಾಟಕ ಬ್ಯಾಂಕ್ ನಲ್ಲಿ ನಿರಂತರವಾಗಿವೆ, ನಿಮ್ಮ ಕುಟುಂಬದ ಆಸರೆಗೆ ಕರ್ನಾಟಕ ಬ್ಯಾಂಕ್ ಸದಾ ಸೇವೆ ನೀಡಲಿದೆ ಎಂದರು.
ಇನ್ನೂ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಶಿವಪ್ರಸಾದ್ ನಾಡಗೌಡ ಮಾತನಾಡಿ, ನಮ್ಮ ಬ್ಯಾಂಕ್ ನಲ್ಲಿ ಶಿಕ್ಷಕ ಶಿವಪ್ರಸಾದ್, ಕಳೆದ 2020 ರಲ್ಲಿ ಪಿಎನ್‌ಬಿ ಮೆಟ್ ಲೈಫ್ ಮೇರೆಟರ್ ಮೇರಾ ಟರ್ಮ್ ಪ್ಲಾನ್ 30 ವರ್ಷದ ಈ ಪ್ಲಾನ್ ಅಲ್ಲಿ ನಾಲ್ಕು ವರ್ಷ ಹಣ ಪಾವತಿಸಿದ್ದರು, ಅದರಂತೆ ಇಂದು ಅವರಿಗೆ ಸುಮಾರು 50 ಲಕ್ಷ ರೂ. ಹಣ ಚೆಕ್ ಮೂಲಕ ನೀಡಲಾಗಿದೆ ಎಂದರು.
ಇನ್ನೂ ಬ್ಯಾಂಕ್ ನ ಗ್ರಾಹಕ ಹಾಗೂ ನಿವೃತ್ತಿ ಶಿಕ್ಷಕ ತಿಪ್ಪೇಸ್ವಾಮಿ ಮಾತನಾಡಿ, ಪ್ರತಿಯೊಬ್ಬರು ಕೂಡ ಈ ಪ್ರೀಯಂ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ನಡೆಸಬಹುದು, ಮನುಷ್ಯ ಇದ್ದಾಗ ತನ್ನ ಕುಟುಂಬಕೆ ನೆರವಾದರೆ ಅವರು ಇಲ್ಲದ ಮೇಲೆ ಈ ಪ್ರೀಯಂ ಯೋಜನೆ ಕುಟುಂಬಕ್ಕೆ ಆಸರೆಯಾಗುತ್ತದೆ ಆದ್ದರಿಂದ ಇಂತಹ ಯೋಜನೆಗಳನ್ನು ಸಾರ್ವಜನಿಕರಿಗೆ ಗ್ರಾಹಕರಿಗೆ ತಲುಪಿಸುವಲ್ಲಿ ಕರ್ನಾಟಕ ಬ್ಯಾಂಕ್ ಸದಾ ಮುಂದಿದೆ ಎಂದರು.
ಇದೇ ಸಂಧರ್ಭದಲ್ಲಿ
ಕರ್ನಾಟಕ ಬ್ಯಾಂಕ್ ಚೀಫ್ ಮ್ಯಾನೇಜರ್ ಸುಧೀಂದ್ರ ಪಂಚಮುಖಿ, ಬ್ಯಾಂಕ್ ವ್ಯವಸ್ಥಾಪಕ ಶಿವಪ್ರಸಾದ್ ನಾಡಗೌಡ, ಬ್ಯಾಂಕಿನ ಸಹಾಯಕ ಶಾಖಾಧಿಕಾರಿ ಚರಣ್, ಹಾಗೂ ಸಾರ್ವಜನಿಕರು, ಗ್ರಾಹಕರು ಪಾಲ್ಗೊಂಡಿದ್ದರು