ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರಕ್ಕೆ ಆಗಮಿಸಿದ ಕರ್ನಾಟಕ ಜ್ಯೋತಿ ರಥಯಾತ್ರೆ ಪಟ್ಟಣದಲ್ಲಿ ಭವ್ಯ ಮೆರವಣಿಗೆ.
ನಾಯಕನಹಟ್ಟಿ:: ಜುಲೈ 11. ಕರ್ನಾಟಕ ಸಂಭ್ರಮ 50ರ ಅಂಗವಾಗಿ ಕರ್ನಾಟಕ ಜ್ಯೋತಿ ರಥಯಾತ್ರೆ ಭವ್ಯ ಮೆರವಣಿಗೆ ಗುರುವಾರ ಪಟ್ಟಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪಟ್ಟಣ ಪಂಚಾಯಿತಿ ತೋಟಗಾರಿಕೆ ಕೃಷಿ ಇಲಾಖೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಕನ್ನಡ ಪರ ಸಂಘಟನೆಗಳು ಗಣ್ಯರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹತ್ತಿರ ಕರ್ನಾಟಕ ಜ್ಯೋತಿ ರಥಯಾತ್ರೆಯ ರಥವನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ಬಳಿಕ ವಿವಿಧ ಜನಪದ ಕಲಾತಂಡಗಳೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು.
ಇದೆ ವೇಳೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ವೈ ಗೋಪಾಲ ಕೃಷ್ಣ ಅವರು ಭುವನೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಿ.
ಇದೆ ವೇಳೆ ಶಾಸಕ ಎನ್ ವೈ ಗೋಪಾಲಕೃಷ್ಣ ಮಾತನಾಡಿದ ಅವರು ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ನಾಯಕನಹಟ್ಟಿ ಪಟ್ಟಣದ ಆರಾಧ್ಯ ದೈವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಆವರಣದಲ್ಲಿ ನನ್ನ ಇತಿಹಾಸದ ಪುಟದಲ್ಲಿ ಇಷ್ಟೊಂದು ಜನಸಂಖ್ಯೆ ಕನ್ನಡದ ಬಗ್ಗೆ ಇಟ್ಟಂತ ಅಭಿಮಾನ ತಾಯಿ ಭುವನೇಶ್ವರಿ ಕನ್ನಡ ಮನಸ್ಸಿನ ಹಿರಿಯರು ಹಿರಿಯರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಂಗನವಾಡಿ ಆಶಾ ಕಾರ್ಯಕರ್ತರು ಪಟ್ಟಣ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಶಿಕ್ಷಣ ಇಲಾಖೆಯ ಜೊತೆಗೂಡಿ ತಾಯಿ ಭುವನೇಶ್ವರಿಗೆ ಅದ್ದೂರಿಯಾಗಿ ಇಂದು ವಿಶೇಷವಾಗಿ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಯನ್ನು ಮಾಡಲಾಗಿದೆ ದೇವರಾಜ್ ಅರಸು ಅವರು ಕರ್ನಾಟಕ ಏಕೀಕರಣ ನಂತರ ಮೊಟ್ಟಮೊದಲ ಮೈಸೂರು ಬದಲಾಗಿ ಕರ್ನಾಟಕ ಇಂದು ನಾಮಕರಣವಾಯಿತು ಅದರ ಪ್ರಯುಕ್ತ 50 ವರ್ಷದ ಸಂಭ್ರಮಾಚರಣೆಯನ್ನು ಮಾಡಿದ್ದೇವೆ
ಕನ್ನಡದ ಮನಸುಗಳು ವಿಜೃಂಭಣೆಯಿಂದ ಸ್ವಾಗತ ನೀಡುವೆ ಎಂದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷಾ, ಇಒ ಶಶಿಧರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ ಎಂ ಶಿವಸ್ವಾಮಿ ತಾಲೂಕು ಅಧ್ಯಕ್ಷ ವೀರಭದ್ರಯ್ಯ. ಹೋಬಳಿಯ ಘಟಕ ಅಧ್ಯಕ್ಷ ಬಿ ಕಾಟಯ್ಯ, ನಲಗೇತನಹಟ್ಟಿ ಜಿ.ವೈ ತಿಪ್ಪೇಸ್ವಾಮಿ, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಪಾಲಯ್ಯ, ನಾಡಕಚೇರಿ ಉಪ ತಹಸಿಲ್ದಾರ್ ಬಿ ಶಕುಂತಲಾ, ಹೋಬಳಿಯ ಮುಖಂಡರಾದ ನೇರಲಗುಂಟೆ ಸೂರನಾಯಕ, ಬಂಡೆ ಕಪಿಲೆ ಓಬಣ್ಣ, ಪ್ರಭುಸ್ವಾಮಿ, ತಳಕು ಮತ್ತು ನಾಯಕನಹಟ್ಟಿ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ, ವಕೀಲ ಉಮಾಪತಿ, ಪಟ್ಟಣ ಪಂಚಾಯಿತಿ ಸದಸ್ಯ ಸೈಯದ್ ಅನ್ವರ್, ಸುನಿತಾ ಜಿ ಬಿ ಮುದಿಯಪ್ಪ, ಡಿ ಓಬಯ್ಯ ದಾಸ್ ,ಟಿ ಬಸಪ್ಪ ನಾಯಕ, ಸಿ ಬಿ ಮೋಹನ್, ಜಿ ಬಿ ಮುದಿಯಪ್ಪ, ವರವು ಕಾಟಯ್ಯ, ಶಂಕರ್ ಮೂರ್ತಿ ಕುದಾಪುರ ಕೆ. ಜಿ. ಪ್ರಕಾಶ್, ಟಿ ರಾಜಣ್ಣ ದೇವರಹಳ್ಳಿ, ರೇಖಗೇರೆ ಅಶೋಕ್, ಜೋಗಿಹಟ್ಟಿ ಗೋವಿಂದಪ್ಪ ,ಎಚ್ ಬಿ ತಿಪ್ಪೇಸ್ವಾಮಿ, ಗುಂತುಕೋಲಮನಹಳ್ಳಿ ಗುಂಡಯ್ಯ ಮಲ್ಲಿಕಾರ್ಜುನ್ ವಕೀಲ ಮಲ್ಲೇಶ್, ಗೌಡಗೆರೆ ಗ್ರಾ. ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಟಿ ರಂಗಪ್ಪ, ಸೇರಿದಂತೆ ಪಟ್ಟಣದ ಎಲ್ಲಾ ಶಾಲೆಯ ಶಿಕ್ಷಕ ಶಿಕ್ಷಕರು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹೋಬಳಿಯ ಎಲ್ಲಾ ಕನ್ನಡ ಮನಸುಗಳು ಇದ್ದರು