ನವೋದಯ ಶಾಲೆಗೆ ಆಯ್ಕೆಯಾದ ಜೀವನ್ ಹೆಚ್ ವಿದ್ಯಾರ್ಥಿಗೆ ಸನ್ಮಾನ
ನಾಯಕನಹಟ್ಟಿ : ನಾಯಕನಹಟ್ಟಿ
ಪಟ್ಟಣದ ಜೀವನ್ ಹೆಚ್ ತಂದೆ ಲೇಟ್ ಹಂಸರಾಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಎ.ಕೆ ಕಾಲೋನಿ, ನಾಯಕನಹಟ್ಟಿ ಶಾಲೆಯಲ್ಲಿ ಮೊಟ್ಟಮೊದಲ ಬಾರಿಗೆ ಅವರ ತಾಯಿಯ ತಿಪ್ಪಮ್ಮ ಪ್ರೋತ್ಸಾಹ ಹಾಗೂ ಶಾಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ೨೦೨೪-೨೫ನೇ ಸಾಲಿನ ಜವಾಹರ್ ಲಾಲ್ ನೆಹರು ನವೋದಯ ವಿದ್ಯಾಲಯದ ಪ್ರವೇಶ ಪರೀಕ್ಷೆಯನ್ನು ಬರೆದು ಶಾಲಾ ಪ್ರವೇಶಕ್ಕೆ ಆಯ್ಕೆಯಾಗಿರುವ ಈ ವಿದ್ಯಾರ್ಥಿಗೆ ಪಟ್ಟಣದಲ್ಲಿ ಬುಧವಾರ ಮದರ್ ತೆರೇಸಾ ಗ್ರಾಮೀಣ ಸಂಸ್ಥೆ ನಾಯಕನಹಟ್ಟಿ ಹಾಗೂ ಕರ್ನಾಟಕ ರಕ್ಷಣಾ ವೇಧಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ ವತಿಯ ಎಲ್ಲಾ ಪಧಾಧಿಕಾರಿಗಳು ಸೇರಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮದರ್ ತೆರೇಸಾ ಸಂಸ್ಥೆ ಕಾರ್ಯದರ್ಶಿ ಶಿವಮೂರ್ತಿ ಓಬಯ್ಯನಹಟ್ಟಿ, ಕರವೇ ಹೋಬಳಿ ಅಧ್ಯಕ್ಷ ಮುತ್ತಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜ್ ಮೀಸೆ, ಹಸಿರು ಸೇನೆ ಜಿಲ್ಲಾ ಉಪದ್ಯಕ್ಷ ನವೀನ್ ಮದಕರಿ, ಕರವೇ ಹೋಬಳಿ ಉಪಾಧ್ಯಕ್ಷರಾದ ಮಂಜುನಾಥ, ಸುರೇಶ, ಟಿ. ಬೋರಸ್ವಾಮಿ, ರಾಘವೇಂದ್ರ, ರಾಮಚಂದ್ರ, ಮಂಜು ಇತರರು ಇದ್ದರು.