?ಕರ್ನಾಟಕ ದಾಕ್ಷ ರಸ ನಿಗಮ ಮಂಡಳಿ ಅಧ್ಯಕ್ಷ ಡಾ. ಬಿ ಯೋಗೇಶ್ ಬಾಬು ರವರ 41ನೇ ವರ್ಷದ ಜನ್ಮದಿನದ ಪ್ರಯುಕ್ತ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಬ್ರೆಡ್ಡು ಹಾಲು ವಿತರಣೆ ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಡಾ. ಬಿ ಕಾಟಂಲಿಂಗಯ್ಯ,
ನಾಯಕನಹಟ್ಟಿ:: ಕರ್ನಾಟಕ ರಾಜ್ಯ ದ್ರಾಕ್ಷಾರಸ ನಿಗಮ ಮಂಡಳಿ ಅಧ್ಯಕ್ಷ ಡಾ. ಬಿ ಯೋಗೇಶ್ ಬಾಬು ರವರಿಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಆಶೀರ್ವಾದ ಮತ್ತು ರಾಜಕೀಯ ಜೀವನ ಉಜ್ವಲವಾಗಲಿ ಎಂದು ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಡಾ. ಬಿ ಕಾಟಂಲಿಂಗಯ್ಯ ಹೇಳಿದ್ದಾರೆ.
ಗುರುವಾರ ಕರ್ನಾಟಕ ರಾಜ್ಯ ದ್ರಾಕ್ಷರಸ ನಿಗಮ ಮಂಡಳಿ ಅಧ್ಯಕ್ಷ ಡಾ.ಬಿ ಯೋಗೇಶ್ ಬಾಬು ರವರ 41ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಲು ಬ್ರೆಡ್ಡು ಹಣ್ಣು ವಿತರಣೆ ಮಾಡಿ ಮಾತನಾಡಿದ್ದಾರೆ. ಡಾಕ್ಟರ್ ಬಿ ಯೋಗೇಶ್ ಬಾಬು ರವರು ಸರಳ ಸಜ್ಜನ ರಾಜಕಾರಣಿ ಯುವ ನಾಯಕ ಈ ಭಾಗದ ಬಡವರ ಬಂಧು ಎಂದೇ ಖ್ಯಾತಿ ಪಡೆದಂತಹ ಕರ್ನಾಟಕ ರಾಜ್ಯ ದ್ರಾಕ್ಷ ರಸ ನಿಗಮ ಮಂಡಳಿಯ ಅಧ್ಯಕ್ಷರಾಗಿ ಉತ್ತಮವಾಗಿ ಆಡಳಿತವನ್ನು ನಡೆಸುತ್ತಿದ್ದಾರೆ. ಶ್ರೀ ಗುರು ತಿಪ್ಪೇರುದ್ರಸ್ವಾಮಿ ಆಶೀರ್ವಾದ ಈ ಕ್ಷೇತ್ರದ ಜನರ ಆಶೀರ್ವಾದ ಹಾಗೂ ರಾಜಕೀಯ ಜೀವನ ಉಜ್ವಲವಾಗಲಿ ಎಂದು ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದರು.
ಇದೇ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ರಾಜುನಾಯಕ ಚೌಳಕೆರೆ, ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಘಟಕ ಅಧ್ಯಕ್ಷ ಪಿ ಮುತ್ತಯ್ಯ ಜಾಗನೂರಹಟ್ಟಿ, ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ, ನಗರ ಘಟಕ ಉಪಾಧ್ಯಕ್ಷ ಓ. ರಾಘವೇಂದ್ರ, ನಗರ ಘಟಕ ಗೌರವಾಧ್ಯಕ್ಷ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಶಿವಮೂರ್ತಿ, ಡಾ. ಪಾಲಯ್ಯಮಾರಮ್ಮನಹಳ್ಳಿ, ವರವು, ತಿಪ್ಪೇಸ್ವಾಮಿ RT. ಕೆರೆಯಾಗಳಹಳ್ಳಿ ಯುವ ಕಾಂಗ್ರೆಸ್ ಮುಖಂಡರು, ತಿಪ್ಪೇಸ್ವಾಮಿ BT ಚನ್ನಬಸಯ್ಯನಹಟ್ಟಿ ಯುವ ಕಾಂಗ್ರೆಸ್ ಮುಖಂಡರು, ಮಾಜಿ ಗ್ರಾಮ ಪಂಚಾಯತಿ ಸದಸ್ಯರು ವಾಸಣ್ಣ ಭೀಮನಕೆರೆ, ಬೋರಣ್ಣ ಕೊಂಡಯ್ಯನಕಪಿಲೆ ರಾಜಣ್ಣ ಭೀಮನಕೆರೆ ಕಾಟಂಲಿಂಗ, ಸುರೇಶ್, ರಾಮಣ್ಣ, ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌಡಗೆರೆ ಜಿ ಟಿ ತಿಪ್ಪೇಸ್ವಾಮಿ, ನಾಯಕನಹಟ್ಟಿ ಪ್ರವೀಣ್, ಮಲ್ಲೂರಹಳ್ಳಿ ತಿಪ್ಪೇಶ್ ಇದ್ದರು