ಚಳ್ಳಕೆರೆ :
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ ರಘುಮೂರ್ತಿ ರವರು ಚಳ್ಳಕೆರೆ ತಾಲ್ಲೂಕಿನ ಉಪ್ಪಾರಹಟ್ಟಿ ಗೆಟ್ ನಲ್ಲಿ ನಡೆದ ನೂತನ ಪೆಟ್ರೋಲ್ ಬಂಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಚಳ್ಳಕೆರೆ ತಾಲ್ಲೂಕಿನ ಉಪ್ಪಾರಹಟ್ಟಿ ಗೆಟ್ ನಲ್ಲಿ ಶ್ರೀ ಶ್ರೀ ಡಾ. ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು ಹಾಗೂ ಶ್ರೀ ಶ್ರೀ ಮಲ್ಲಯ್ಯ ಸ್ವಾಮೀಜಿಗಳವರ ದಿವ್ಯ ಸಾನಿಧ್ಯದಲ್ಲಿ ನೂತನವಾಗಿ ಆರಂಭವಾದ ಶ್ರೀ ಭಗೀರಥ ಪ್ಯೂಯಲ್ ಪಾಯಿಂಟ್ (ಪೆಟ್ರೋಲ್ ಬಂಕ್) ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾಲೀಕರಾದ ಓ.ನಾಗೇಂದ್ರಯ್ಯ, ಹಂಚಿ ಶಿವಸ್ವಾಮಿ ಅಧ್ಯಕ್ಷರು, ಸೀತಾರಾಘವ ಬ್ಯಾಂಕ್ ಹೊಸದುರ್ಗ, ಹೆಚ್.ಬಿಲ್ಲಪ್ಪ ವಿಶ್ರಾಂತ ನ್ಯಾಯಮೂರ್ತಿಗಳು, ಎ.ಪಿ.ಶಂಕರ್ ರಾಜ್ಯ ಉಪ್ಪಾರ ಸಂಘದ ವಕ್ತಾರರು, ಲಿಂಗಾರೆಡ್ಡಿ ಅಧ್ಯಕ್ಷರು ಖಾಸಗಿ ಬಸ್ ಮಾಲೀಕರ ಸಂಘ, ಹನುಮಂತಪ್ಪ ಅಧ್ಯಕ್ಷರು ತಾಲ್ಲೂಕು ಉಪ್ಪಾರ ಸಂಘ, ನಗರಸಭೆ ಸದಸ್ಯರಾದ ರಮೇಶ್ ಗೌಡ, ರಾಘವೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಪ್ಪ, ಶಶಿಧರ, ಮುಖಂಡರುಗಳಾದ ಶಿವಣ್ಣ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.