ಚಳ್ಳಕೆರೆ :
ಚಳ್ಳಕೆರೆ ತಾಲ್ಲೂಕಿನ ಕ್ಯಾದಿಗುಂಟೆ ಗ್ರಾಮದ ಹತ್ತಿರ ಇರುವ ಕೆಂಚಮ್ಮನ ಹಳ್ಳಿ ಗೇಟ್ ನಲ್ಲಿ ಐ.ಪಿ.ಎಸ್.3 ಯೋಜನೆಯ ಪ್ರಗತಿ ಪರಿವೀಕ್ಷಣೆ ಮತ್ತು ಅಧಿಕಾರಿಗಳೊಂದಿಗೆ ಆಗಮಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ ಖರ್ಗೆ ವೀಕ್ಷಣೆ ಮಾಡಿದರು.
ಇನ್ನೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ ರಘುಮೂರ್ತಿ ರವರು ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಗಳಾದ ಶಶಿಧರ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರವಿಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಪ್ಪ, ಶಶಿಧರ, ನಗರಸಭೆ ಸದಸ್ಯರಾದ ರಮೇಶ್ ಗೌಡ, ರಾಘವೇಂದ್ರ, ಮುಖಂಡರುಗಳಾದ ನರಸಿಂಹಮೂರ್ತಿ, ದೇವರಾಜ್, ಶಶಿ, ವರದರಾಜ್, ನಾಗರಾಜ್, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.