ಚಳ್ಳಕೆರೆ :
ಕರ್ನಾಟಕ ಸಂಭ್ರಮ-50ರ ಅಂಗವಾಗಿ ರಾಜ್ಯಾಧ್ಯಂತ ಸಂಚರಿಸುತ್ತಿರುವ
ಕರ್ನಾಟಕ ಜ್ಯೋತಿ ರಥಯಾತ್ರೆಯು ನಾಯಕನಹಟ್ಟಿ ಮಾರ್ಗವಾಗಿ
ಜುಲೈ 12 ರ ಬೆಳಗ್ಗೆ 10 ಗಂಟೆಗೆ ನಗರ ದೇವತಿ ಶ್ರೀಚಳ್ಳಕೆರೆಮ್ಮ
ದೇವಸ್ಥಾನ ಬಳಿ ಬರಮಾಡಿಕೊಳ್ಳಲಾಗುವುದು.
ರಥಯಾತ್ರೆಗೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಲಿದ್ದು ಪ್ರಮುಖ
ರಸ್ತೆಯ ಮೂಲಕ ನೆಹರು ವೃತ್ತ, ಅಂಬೇಡ್ಕರ್ ವೃತ್ತ, ವಾಲ್ಮೀಕಿ ವೃತ್ತದ
ಮೂಲ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಮಾಡುವ
ಮೂಲಕ ಪ್ರವಾಸಿ ಮಂದಿರದಿಂದ ಬೀಳ್ಕೊಡುವ ಮಾಡಲಾಗುವುದು.
ಕರ್ನಾಟಕ ಜ್ಯೋತಿ ರಥಯಾತ್ರೆಯಲ್ಲಿ ತಾಲೂಕು ಮಟ್ಟದ ವಿವಿಧ
ಇಲಾಖೆಯ ಅಧಿಕಾರಿಗಳು, ಕನ್ನಡ ಪರ ಸಂಘಟನೆಗಳು, ರೈತರ
ಸಂಘಟನೆ, ವಿದ್ಯಾರ್ಥಿಗಳು, ಅಂಗನಾಡಿ ಕಾರ್ಯಕರ್ತೆಯರು
ಸೇರಿದಂತೆ ವಿವಿಧ ಸಂಘಟನೆಗಳು, ಸಾರ್ವಜನಿಕರು
ಸಂಖ್ಯೆಯಲ್ಲಿ ಭಾಗವಹಿಸಿ ಕರ್ನಾಟಕ ಜ್ಯೋತಿ ರಥಯಾತ್ರೆಯನ್ನು
ಯಶಸ್ವಿಗೊಳಿಸುವಂತೆ ತಹಶೀಲ್ದಾರ್ ರೇಹಾನ್ ಪಾಷ ಕರೆ ನೀಡಿದ್ದಾರೆ.