ಚಳ್ಳಕೆರೆ :
ಕಳೆದು ಹೋಗಿದ್ದ 80 ಪೋನ್ ಗಳನ್ನು ಪತ್ತೆ ಹಚ್ಚಿದ
ಪೊಲೀಸರು
ಚಿತ್ರದುರ್ಗದ ಸೈಬರ್ ಕ್ರೈಂ ಪೊಲೀಸರು ಕಳೆದು ಹೋಗಿದ್ದ,
ಸಾರ್ವಜನಿಕರ 80 ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ವಿವಿಧ ಕಂಪನಿಗಳ ಮೊಬೈಲ್
ಗಳನ್ನು ಕಳೆದು ಕೊಂಡಿದ್ದ ಮಾಲೀಕರು ಸೆನ್ ಠಾಣೆಗೆ ದೂರು
ನೀಡಿದ್ದು,
ಅವುಗಳನ್ನು ಕರ್ನಾಟಕ 54, ಕೇರಳ 18, ಆಂಧ್ರ
06 ಮತ್ತು ಗೋವಾದಲ್ಲಿ 2 ಫೋನ್ ಗಳನ್ನು ಪತ್ತೆ ಹಚ್ಚುವಲ್ಲಿ
ಯಶಸ್ವಿಯಾಗಿದ್ದಾರೆ.
ಇನ್ನೂ ಜಿಲ್ಲಾ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ರವರು, ಸಾರ್ವಜನಿಕರನ್ನು ಕುರಿತು ಮಾತನಾಡಿದರು..