ಚಳ್ಳಕೆರೆ :
ಅನಧಿಕೃತ ಕಬ್ಬಿಣದ ಅದಿರು ಸಾಗಾಣಿಕೆ ೩ ವಾಹನಗಳ
ವಶ
ಅನಧಿಕೃತವಾಗಿ ಕಬ್ಬಿಣದ ಅದಿರು ಸಾಗಾಣಿಕೆ ಮಾಡುತ್ತಿದ್ದ
ವಾಹನಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು
ಚಳ್ಳಕೆರೆ ಯಲ್ಲಿ ವಶಪಡಿಸಿಕೊಂಡಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಡಾ. ಮಹೇಶ್,
ಹಿರಿಯ ಭೂ ವಿಜ್ಞಾನಿ ಕೆ. ಎಸ್. ನಾಗೇಂದ್ರಪ್ಪ ನೇತೃತ್ವದಲ್ಲಿ
ಸಿಬ್ಬಂದಿಗಳಾದ ಚೇತನ್ ಮತ್ತು ಜಾಕೀರ್ ಅವರೊಂದಿಗೆ ಗಸ್ತು
ಕಾರ್ಯ ನಡೆಸಿ ಅನಧಿಕೃತವಾಗಿ ಕಬ್ಬಿಣದ ಅದಿರು ಸಾಗಾಣಿಕೆ
ಮಾಡುತ್ತಿದ್ದ ಮೂರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.