ಚಳ್ಳಕೆರೆ :
ವಚನ ಸಾಹಿತ್ಯ ಆದರ್ಶ ಬದುಕಿಗೆ ಬೇಕಾದ ಎಲ್ಲಾ
ಶಕ್ತಿಯನ್ನು ಕೊಟ್ಟಿದೆ
ಅಗಸ ನೀರೊಳಗಿದ್ದು ಬಾಯಾರಿ ಸತ್ತಂತೆ ಆಗಿದೆ ಜನರ ಸ್ಥಿತಿ.
ಪ್ರಕೃತಿ ಏನೆಲ್ಲವನ್ನು ಕೊಟ್ಟಿದ್ದರು ಅದನ್ನು ದುರ್ಬಳಿಕೆ ಮಾಡಿಕೊಂಡ
ಮನುಷ್ಯ ತನ್ನ ತಲೆಯ ಮೇಲೆ ಚಪ್ಪಡಿ ಎಳೆದುಕೊಳ್ಳುತ್ತಿದ್ದಾನೆ.
ವಚನ ಸಾಹಿತ್ಯ ಆದರ್ಶ ಬದುಕಿಗೆ ಬೇಕಾದ ಎಲ್ಲಾ ಶಕ್ತಿಯನ್ನು
ಕೊಟ್ಟಿದ್ದರು ಅದನ್ನು ಅರಿತು ಆಚರಣೆಯಲ್ಲಿ ತರವಲ್ಲಿ
ಸೋಲುತ್ತಿದ್ದೇವೆ.
ಈ ಸೋಲಿನ ಮಾರ್ಗ ಬಿಟ್ಟು ವಚನ ಸಾಹಿತ್ಯದ
ಸದ್ಬಳಕೆ ಮಾಡಿಕೊಳ್ಳೋಣ ಎಂದು ಸಾಣೇಹಳ್ಳಿ ಶ್ರೀಗಳು ಒಲಿದಂತೆ
ಹಾಡುವೆ ಕಾರ್ಯಕ್ರಮ ದಲ್ಲಿ ಹೇಳಿದರು.