ಚಳ್ಳಕೆರೆ: ಚಳ್ಳಕೆರೆ ತಾಲೂಕಿನ ಸುಮಾರು ನಲವತ್ತು ಗ್ರಾಮ ಪಂಚಾಯತಿ ಗಳಲ್ಲಿ ಸ್ವಚ್ಚತೆಯಿಲ್ಲದೆ ಸಾರ್ವಜನಿಕರು ದಿನ ನಿತ್ಯ ಡೆಂಗ್ಯೂ ಹಾಗೂ ಇತರೆ ಪ್ರಕರಣಗಳಲ್ಲಿ ಸಾವು ನೋವು ಅನುಭವಿಸುವಂತಾಗಿದೆ ಎಂದು ನಗರದ ತಾಲ್ಲೂಕು
ಪಂಚಾಯಿತಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ
ಪದಾಧಿಕಾರಿಗಳು ಬಾರುಕೋಲು ಚಳುವಳಿ ನಡೆಸಿದರು.
ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ
ತಾಲ್ಲೂಕಿನ ಹಳ್ಳಿಗಳಲ್ಲಿ ಚರಂಡಿಗಳು, , ಮನೆಗಳ ಅಕ್ಕಪಕ್ಕ ಬೆಳೆದ
ಗಿಡಗಂಟಿಗಳು ಬೆಳೆದು ಸ್ವಚ್ಚತೆ ಕಾಣದೆ ಸೊಳ್ಳೆಗಳು ಉತ್ಪತ್ತಿಯಾಗಿ
ಡೆಂಗ್ಯೂ ಹರಡುತ್ತಿದೆ.
ಚಿಕನ್ ಗುನ್ಯ ಮಲೇರಿಯಾದಂತ ಮಾರಕ
ರೋಗಗಳಿಂದ ಕೆಮ್ಮು, ನೆಗಡಿ, ಜ್ವರ, ವಾಂತಿ ಬೇಧಿಗಳಂತಹ
ಕಾಯಿಲಿಗೆ ತುತ್ತಾಗುತ್ತಿರುವುದರಿಂದ ಜನರು ಚಿಕತ್ಸೆಗಾಗಿ ಹಳ್ಳುಗಳಿಂದ
ನಗದ ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ.
ಹಳ್ಳಿಗಳಲ್ಲಿ ಚರಂಡಿಗಳು,
ಕುಡಿಯುವ ನೀರಿನ ಟ್ಯಾಂಕ್‌ಗಳು ಸ್ವಚ್ಚತೆ ಮಾಡಿಸುವಂತೆ
ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು
ಕ್ರಮ ತೆಗೆದುಕೊಳ್ಳದೆ
ಮೌನವಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ
ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಹಳ್ಳಿಗಳಲ್ಲಿ ಚರಂಡಿ,ಮನೆ,ಶೌಚಾಲಯ, ಪಾತ್ರೆ ತೊಳೆದ ನೀರು,ಬಟ್ಟೆ
ಒಗೆದು ನೀರು ನಿಲ್ಲದಂತೆ ಇಂಗು, ಗುಂಡಿ ಕಡ್ಡಾಯವಾಗಿ
ಮನನೊಂದು ನಿರ್ಮಸಿಕೊಳ್ಳುವಂತೆ ಗ್ರಾಮ ಪಂಚಾಯಿತಿಯಿದ
ಜಾಗೃತಿ ಮೂಡಿಸಬೇಕು.
ಮನೆ ಅಕ್ಕಪಕ್ಕ ನಿಂತ ನೀರಿಗೆ ಮತ್ತು
ಚರಂಡಿಗೆ ಗ್ರಾಮ ಪಂಚಾಯಿತಿಯಿÀದ ಸ್ವಚ್ಚತೆಗೊಳಿಸಿ ಬ್ಲೀಚಿಂಗ್
ಪೌಡರ್ ಹಾಕಬೇಕು.
ರೋಗ ಹರಡತಂತೆ ಜಾಗೃತಿ ಮೂಡಿಸಬೇಕು.
ಹಳ್ಳಿಗಳಲ್ಲಿ ಆಗುತ್ತಿರುವ ರೋಗ ಲಕ್ಷಣಗಳ ಬಗ್ಗೆ ದೂರು ನೀಡಿದರೂ
ಸ್ವಚ್ಚತೆ ಬಗ್ಗೆ ನಿರ್ಲಕ್ಷ ವಹಿಸುವ ಪಿಡಿಓಗಳನ್ನೇ ಹೊಣೆಗಾರರನ್ನಾಗಿ
ಮಾಡಿ ಶಿಸ್ತು ಕ್ರಮ ತೆಗೆದುಕೊಳ್ಳಬೇಕು.
ಹಳ್ಳಿಗಳಲ್ಲಿ ವಿದ್ಯುತ್ ದೀಪಗಳು ಹಗಲಿನಲ್ಲಿ ಉರಿದು ವಿದ್ಯುತ್
ಪೋಲಾಗಿ ಸರ್ಕಾರಕ್ಕೆ ನಷ್ಟವಾಗುತ್ತಿದೆ. ವಿದ್ಯುತ್ ದೀಪಗಳಿಗೆ ಆಫ್
ಅಂಡ್ ಆನ್ ಮಾಡುವ ಸ್ವೀಚ್ ಅಳವಡಿಸಬೇಕು. ತಳಕು ಗ್ರಾಮ
ಪಂಚಾಯಿತಿಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ
ಬಂದಿದ್ದು ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯ
ಮಾಡಿದರು.
ಈ ವೇಳೆ ರೈತ ಮುಖಂಡರಾದ ಬಾಲೇನಹಳ್ಳಿ ಓ.ಟಿ.ತಿಪ್ಪೇಸ್ವಾಮಿ,
ಕೋನಸಾಗರ ಮಂಜುನಾಥ ಸೇರಿದಂತೆ ಮುಂತಾದವರು ಇದ್ದರು.