ಚಳ್ಳಕೆರೆ :
ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟ ತಾಲೂಕು ಅಧ್ಯಕ್ಷರಾಗಿ ಕನ್ನಡ ಗಂಗಾ ಪತ್ರಿಕೆಯ ಸಂಪಾದಕ ಗಂಗಾಧರ ಅವಿರೋಧ ಆಯ್ಕೆ
ನಗರದ ಚಿತ್ರದುರ್ಗ ರಸ್ತೆಯಲ್ಲಿ ಇರುವ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಮಹಾ ಒಕ್ಕೂಟದ ಜಿಲ್ಲಾ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ
ಚಳ್ಳಕೆರೆ ತಾಲೂಕಿನ ಕರ್ನಾಟಕ ಮಾಧ್ಯಮ ಮಹಾಕೂಟದ ಅಧ್ಯಕ್ಷರನ್ನಾಗಿ ಗಂಗಾಧರ ಇವರನ್ನು ರಾಜ್ಯ ಅಧ್ಯಕ್ಷರಾದ ಕೆ.ಶಿವಕುಮಾರ್ ಇವರು ಅನುಮೋದಿಸಿದರು
ರಾಜ್ಯ ಹಿರಿಯ ಉಪಾಧ್ಯಕ್ಷರಾದ ಸಂಪತ್ ಇವರು ಇವರ ಆಯ್ಕೆಯನ್ನು ಸ್ವಾಗತಿಸಿ ಮುಂದಿನ ದಿನಗಳಲ್ಲಿ ಪತ್ರಕರ್ತರ ಕುಂದು ಕೊರತೆ ಸಮಸ್ಯೆಗಳನ್ನು ಆಲಿಸಿ
ತಾಲೂಕಿನ ಅತ್ಯಂತ ಉತ್ತಮ ಸಂಘಟನೆ ಮಾಡಿಕೊಂಡು ಮುನ್ನೆಡಸಲಿ ಎಂದು ಶುಭ ಹಾರೈಸಿದರು.
ಡಿ.ಈಶ್ವರಪ್ಪ ಮಾತನಾಡಿ,
ಪತ್ರಕರ್ತರು ಸುಮಾರು ವರ್ಷಗಳಿಂದ ವಿವಿಧ ಸಂಘಟನೆಗಳ ಮುಖಾಂತರ ಪತ್ರಕರ್ತರು ತಾಲೂಕಿನ ಅತ್ಯಂತ ಸಭೆ ಸಮಾರಂಭಗಳಲ್ಲಿ ಪತ್ರಕರ್ತರ ನಿವೇಶನ ಮತ್ತು ಪತ್ರಕರ್ತರ ಭವನ ನಿರ್ಮಾಣವಾಗಲಿ ಎಂದರು.
ಜಿಲ್ಲಾಧ್ಯಕ್ಷ ಜಿಯಾವುಲ್ಲ ಅವರು ಮಾತನಾಡುತ್ತಾ ಜಿಲ್ಲಾಧ್ಯಂತ ಪತ್ರಕರ್ತರು ದಿನನಿತ್ಯ ಸಾರ್ವಜನಿಕರ ಸಮಸ್ಯೆಗಳಲ್ಲಿ ಸುದ್ದಿ ಬಿತ್ತರಿಸುವಂತಹ ಕಾರ್ಯಗಳಲ್ಲಿ ಕೆಲಸ ಮಾಡುವಂತ ಪತ್ರಕರ್ತರಿಗೆ ಸರ್ಕಾರದಿಂದಾಗಲಿ ಯಾವುದೇ ಪತ್ರಕರ್ತನ ಕುಟುಂಬಕ್ಕೆ ಯಾವುದೇ ಭದ್ರತೆ ಇಲ್ಲದೆ ಸುದ್ದಿ ನಿರ್ವಹಿಸುತ್ತಾನೆ ಎಂದರು.
ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಲಿಂಗರಾಜು, ಉಪಾಧ್ಯಕ್ಷರಾಗಿ ಡಿ.ತಿಪ್ಪೇಸ್ವಾಮಿ, ಖಜಾಂಚಿಯಾಗಿ ತಿಪ್ಪೇಸ್ವಾಮಿ, ಸದಸ್ಯರಾಗಿ ರೇವಣ್ಣ, ಮಾರಣ್ಣ ಪಿ, ಬಷಿರ್ ಆಯತ್, ಜಿಲ್ಲಾ ಉಪಾಧ್ಯಕ್ಷರು ಜಯರಾಮ್, ಇನ್ನು ಕಾರ್ಯಕರ್ತರು ಉಪಸ್ಥಿತರಿದ್ದರು