ಗ್ರಾಮೀಣ ಪ್ರದೇಶದ ಬಡ ಜನರಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ನೆರವು ಅಬ್ಬೇನಹಳ್ಳಿ ಗ್ರಾ.ಪಂ ಸದಸ್ಯ ಚೌಳಕೆರೆ ಬಿ.ಸಣ್ಣಪಾಲಯ್ಯ.
ನಾಯಕನಹಟ್ಟಿ:: ಜುಲೈ 5. ಬರಗಾಲದಿಂದ ಗ್ರಾಮೀಣ ಭಾಗದ ಜನರ ಬದುಕು ದೃಷ್ಠಿರವಾಗಿತ್ತು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಪ್ರದೇಶದ ಬಡ ಜನರಿಗೆ ವರದಾನವಾಗಿದೆ ಎಂದು ಅಬ್ಬೆನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಬಿ ಸಣ್ಣ ಪಾಲಯ್ಯ ಹೇಳಿದ್ದಾರೆ.
ಶುಕ್ರವಾರ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೌಳಕೆರೆ ಗ್ರಾಮದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ರಾಜ ಕಾಲುವೆ ಕಾಮಗಾರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ನಡೆಸಲಾಗುತ್ತಿದ್ದು ಕೂಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಮಹತ್ವದ ಯೋಜನೆಯದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಬಡಜನರಿಗೆ ತುಂಬಾ ಅನುಕೂಲವಾಗುತ್ತದೆ ಒಬ್ಬ ಕೂಲಿ ಕಾರ್ಮಿಕರಿಗೆ ದಿನಕ್ಕೆ 349 ರೂಪಾಯಿ ವೇತನವನ್ನು ನೀಡುತ್ತಿದ್ದು ಪುರುಷರು ಮತ್ತು ಮಹಿಳೆಯರು ನೂರು ದಿನಗಳ ಕಾಲ ಕೆಲಸ ಮಾಡುವ ಅವಕಾಶವನ್ನು ನೀಡಲಾಗಿದೆ ಪ್ರತಿಯೊಬ್ಬ ಕೂಲಿಕಾರ್ಮಿಕರಿಗೆ ನೇರವಾಗಿ ಖಾತೆಗೆ ಹಣ ಬೀಳುವುದರಿಂದ ಗ್ರಾಮದ ಪ್ರತಿಯೊಬ್ಬರೂ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕೆಲಸ ಮಾಡುತ್ತಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಡಿ ನಮ್ಮ ಭಾಗದ ರೈತರಿಗೆ ಅಂತರ್ಜಲ ಉತ್ಪತ್ತಿ ಮಾಡಲಿಕ್ಕೆ ಅನುಕೂಲವಾಗುತ್ತದೆ ರೈತರ ತಮ್ಮ ಜಮೀನಿನಲ್ಲಿ ಬದು ನಿರ್ಮಾಣ ಕಾಮಗಾರಿ ಕೃಷಿಗೊಂಡ ಸೇರಿದಂತೆ ನೆರೆಗಾ ಯೋಜನೆ ಬಡ ಜನರಿಗೆ ನೆರವಾಗಿದೆ ಎಂದರು.
ಇದೇ ವೇಳೆ ಕಾರ್ಮಿಕ ಪ್ರಹ್ಲಾದ್ ಮಾತನಾಡಿ ನಮ್ಮ ಚೌಳಕೆರೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಕೂಲಿ ಕೆಲಸ ನೀಡುವಂತೆ ಮನವಿಯನ್ನ ಮಾಡಲಾಗಿತ್ತು ಆದ್ದರಿಂದ ಗ್ರಾಮ ಪಂಚಾಯತಿಯ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ನಮ್ಮ ಗ್ರಾಮದ ಜನರಿಗೆ ನೂರು ದಿನಗಳ ಕಾಲ ಕೆಲಸ ಸಿಕ್ಕಿದೆ ಎಂದರೆ.
ಇದೇ ಸಂದರ್ಭದಲ್ಲಿ ಚೌಳಕೆರೆ ಗ್ರಾಮಸ್ಥರಾದ ಎಂ ಪಾಲಯ್ಯ, ಸಣ್ಣ ಮಲ್ಲಯ್ಯ, ಸಣ್ಣ ಪಾಪಯ್ಯ, ಪಿ ಮಲ್ಲಯ್ಯ, ಎಸ್ ಪಿ ಬಸಣ್ಣ, ಎಸ್ ಪಿ ಸೂರಯ್ಯ, ಜಿ.ಓಬನಾಯಕ, ಬೋರಮ್ಮ, ತಾಯಮ್ಮ, ಆಶಾಮ್ಮ, ಬಸವರಾಜ್ ಶಿವರಾಜ್ ಇದ್ದರು