ಚಳ್ಳಕೆರೆ :
ಒಕ್ಕಲು ಕಣ ಮಾಡಿಕೊಡುವಂತೆ ದಲಿತರಿಂದ
ಪ್ರತಿಭಟನೆ
ಚಳ್ಳಕೆರೆಯ ಗೋಸಿಕೆರೆಯ ಶಾರದಾ ಕಾಲೋನಿಯ ರಿ ಸರ್ವೇ
ನಂಬರ್ 190 ರಲ್ಲಿ ಎಸ್ಸಿ ಛಲವಾದಿಯ ಖಾಲಿ ನಿವೇಶನದಲ್ಲಿ,
ಒಕ್ಕಲು ಕಣ ಮಾಡಿಕೊಡುವಂತೆ ಒತ್ತಾಯಿಸಿ, ಛಲವಾದಿ
ಮಹಾಸಭಾ ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳು,
ಜಿಲ್ಲಾಧಿಕಾರಿ
ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಖಾಲಿನಿವೇಶನದಲ್ಲಿ
40 ವರ್ಷಗಳಿಂದ ವಾಸವಿದ್ದು, ಅಲ್ಲಿ ನಿವೇಶನ ಮತ್ತು ಒಕ್ಕಲು
ಕಣ ಮಾಡಿಕೊಡಬೇಕೆಂದು ನಿವಾಸಿಗಳು ಒತ್ತಾಯಿಸಿ ಮನವಿ
ನೀಡಿದರು.