ಚಳ್ಳಕೆರೆ :
ಎಸ್ ಆರ್ ಎಸ್ ಶಾಲೆ ಚಿತ್ರದುರ್ಗ ಕ್ಕೆ ಒಂದು ಬ್ರಾಂಡ್
ಆಗಿದೆ
ಬರಡು ಜಿಲ್ಲೆಯಾದ ಚಿತ್ರದುರ್ಗ ದಲ್ಲಿ ಶಿಕ್ಷಣ ಸಂಸ್ಥೆಗಳ ಕೊರತೆ
ಇತ್ತು. ಆದರೆ ಎಸ್ ಆರ್ ಎಸ್ ಸಂಸ್ಥೆಯು ಉತ್ತಮ ದರ್ಜೆ ಶಿಕ್ಷಣ
ನೀಡುತ್ತಿರುವ, ಸಂಸ್ಥೆಯಾಗಿದೆ.
ಎಸ್ ಆರ್ ಎಸ್ ಸಂಸ್ಥೆಯನ್ನು
ಚಿತ್ರದುರ್ಗಕ್ಕೆ ಒಂದು ಬ್ರಾಂಡ್ ಮಾಡಲು ಅಧ್ಯಕ್ಷರು ಹಾಗೂ
ಕಾರ್ಯದರ್ಶಿ ಶ್ರಮಿಸಿದ್ದಾರೆ.
ಎಂದು ಮಾದಾರ ಗುರುಪೀಠದ ಶ್ರೀ
ಮಾದಾರ ಚನ್ನಯ್ಯ ಶ್ರೀಗಳು ಹೇಳಿದರು.
ಅವರು ಕಾರ್ಯಕ್ರಮದ
ಸಾನಿಧ್ಯ ವಹಿಸಿ ಮಾತಾಡಿದರು. ಮಕ್ಕಳ ಪ್ರತಿಭೆ ಹೊರಗೆ
ತೆಗೆಯಲು, ಇಲ್ಲಿನ ಬೋಧಕರು ಶ್ರಮಿಸುತ್ತಿದ್ದಾರೆಂದರು.