ಚಳ್ಳಕೆರೆ :
ಹೊಳಲ್ಕೆರೆಯಲ್ಲಿ ಲಾರಿ ಪಲ್ಟಿ ಹೊಡೆದು ಅಪಘಾತ:
ಪಾರಾದ ಚಾಲಕ
ಹೊಳಲ್ಕೆರೆ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಭೀಕರ ಅಪಘಾತ ನಡೆದು
ಲಾರಿ ಪಲ್ಟಿ ಹೊಡೆದು, ಚಾಲಕ ಪ್ರಾಣಾಪಾಯದಿಂದ ಪಾರಾದ
ಘಟನೆ ನಡೆದಿದೆ.
ಕುಡಿನೀರುಕಟ್ಟೆ ಗ್ರಾಮದ ಬಳಿ ಕಂದಕಕ್ಕೆ ಲಾರಿ
ಉರುಳಿ ಬಿದ್ದು, ಸಂಪೂರ್ಣ ಜಖಂ ಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ
ಕಾಮಗಾರಿ ಹಿನ್ನೆಲೆ ಮಣ್ಣಿನ ರಾಶಿ ಹಾಕಿದ್ದು, ಮಳೆ ಬಿದ್ದಿದ್ದರಿಂದ
ಮಣ್ಣು ಕುಸಿದು ಚಾಲಕನ ನಿಯಂತ್ರಣ ತಪ್ಪಿದ ಲಾರಿ ಪಕ್ಕದ
ಕಂದಕಕ್ಕೆ ಉರುಳಿ ಬಿದ್ದಿದೆ.
ಹೊಳಲ್ಕೆರೆ ಠಾಣಾ ಪೊಲೀಸರು ಸಹ
ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.