ಚಳ್ಳಕೆರೆ ತಾಲೂಕು ಮಟ್ಟದ ಜನ ಸ್ಪಂದನಾ ಸಭೆಯಲ್ಲಿ ಸಾಲು ಸಾಲು ಸಮಸ್ಯೆಗಳು, ಸಮಸ್ಯೆ ಹೇಳಿಕೊಳ್ಳಲು ಸಾಧ್ಯವಾಗಲಿಲ್ಲವೆಂದು ಸಭೆಯಿಂದ ಹೊರ ನಡೆದ ರೈತ ಮುಖಂಡ ಕೆ.ಪಿ.ಭೂತಯ್ಯ.
ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು ಸಮಸ್ಯೆಗಳ ಅಳಲು ಕೇಳಲಿಲ್ಲವಾದಿತೇ..?
ಚಳ್ಳಕೆರೆ : ತಾಲ್ಲೂಕು ಮಟ್ಟದ ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಆಸ್ಪಾದ ನೀಡದ ಕಾರಣ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಗಂಭೀರ ಆರೋಪ
ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಜನ ಸ್ಪಂದನಾ ಕಾರ್ಯಕ್ರಮದಿಂದ ಹೊರ ನಡೆದ ಪ್ರಸಂಗ ನಡೆಯಿತು.
ಕಾಟಚಾರದ ಸಭೆಗಳನ್ನು ಅಧಿಕಾರಿಗಳು ಮಾಡಬಾರದು ಕೇವಲ ನೆಪ ಮಾತ್ರಕ್ಕೆ ಸಭೆಮಾಡಿ ಸರಕಾರಕ್ಕೆ ವರದಿ ಒಪ್ಪಿಸುವುದಾ ಈ ಅಧಿಕಾರಿಗಳ ಉದ್ದೇಶ, ರೈತರ ಸಂಕಷ್ಟ ಅಳಲು ಕೇಳಿಸಿಕೊಳ್ಳಲು ಇವರಿಗೆ ವ್ಯವದಾನ ಇಲ್ಲವಾದಿತೇ..ಎಂದು ಕೆ.ಪಿ.ಭೂತಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಪಂ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಖಾರಿಗಳೇ ಇದರ ಹೊಣೆ ಹೋರಬೇಕು, ಇನ್ನೂ ಸ್ಥಳೀಯ ಶಾಸಕರು ಸಭೆಯಲ್ಲಿ ಎಲ್ಲಾರ ಸಮಸ್ಯೆಗಳನ್ನು ಆಲಿಸಿ ಪರಿಹಾರ ರೂಪಿಸಬೇಕು ಎಂದು ಕಿಡಿಕಾರದರು.
ಇನ್ನೂ ಸಭೆಯಲ್ಲಿ ಮನವಿ ಹಿಡಿದ ಬಂದ ಗ್ರಾಮೀಣ ಪ್ರದೇಶದ ಮುಗ್ದ ಜನರು ನೂಕು ನುಗ್ಗಲಿನಲ್ಲಿ ಶಾಸಕರ ಕೈಗೆ ಮನವಿ ನೀಡಿದಾದರು ಅವರ ಸಮಸ್ಯೆ ಬಗ್ಗೆ ಗಂಬೀರವಾಗಿ ಇತ್ಯರ್ಥದ ಬಗ್ಗೆ ಭರವಸೆ ಇಲ್ಲದೆ ಬಂದ ದಾರಿಗೆ ಸುಂಖ ವಿಲ್ಲವಂತೆ ಮರಳಿ ಒರಟರು,
ಇನ್ನೂ ಕೆಲವು ವಯೋ ವೃದ್ದರು ಸಭೆಯ ಮೆಟ್ಟಿಲು ಹತ್ತಲು ಹಾಗದೆ ಕೆಲವರು ನಾಲ್ಕು ಅಡಿ ಎತ್ತರದ ಕಟ್ಟಡದತ್ತ ಕೈ ತೋರಿಸಿ ಸ್ವಾಮಿ ನನ್ನ ಸಮಸ್ಯೆ ಬಗ್ಗೆ ನೋಡಿ ಎನ್ನುವ ದೃಶ್ಯಗಳು ಕಂಡು ಬಂದವು, ಇನ್ನೂ ಕೆಲವು ಹಳ್ಳಿ ಮುಗ್ದರು ಕೇವಲ ಮೌಖಿಕವಾಗಿ ಸಮಸ್ಯೆ ಬಗ್ಗೆ ಗಮನಹರಿಸಿದಾದರು ಲಿಖಿತವಾಗಿ ಬರೆಯಲು ಬಾರದೆ ಕೇವಲ ಮೌಖಿಕ ಮಾತಿಗೆ ಸೀಮಿತವಾದ ಜನ ಸ್ಪಂದನಾ ಸಭೆ,
ಇನ್ನೂ ಬೆಳಗ್ಗೆ 9ಗಂಟೆಯಿAದ ಕಾರ್ಯಕ್ರಮದ ಮುಂದೆ ಕೂತಿದ್ದೆನೆ ಹಸಿವಾಗಿದೆ ನನ್ನನ್ನು ಸೀಮಂತ ಕಾರ್ಯಕ್ರಮಕ್ಕೆಂದು ಕರೆದುಕೊಂಡು ಬಂದರು ಆದರೆ ಸಮಯ 2ಗಂಟೆಯಾದರು ಊಟವಿಲ್ಲ ಕಾರ್ಯಕ್ರಮ ವಿಕ್ಷಣೆ ಮಾಡುತ್ತೆನೆ ಎಂದು ಅಳಲು ತೋಡಿಕೊಂಡರು.
ಇನ್ನೂ ಸಮಸ್ಯೆ ಹೊತ್ತು ಬಂದ ಹಳ್ಳಿ ಹೈದರಗಿಂತ ಅಂಗನವಾಡಿ ಕಾರ್ಯಕರ್ತೆಯರು ತುಂಬಿದ ದೃಶ್ಯ ಕಂಡು ಬಂದಿತು.
ಕೇವಲ ಅರ್ಜಿ ನೀಡಲು ಈ ಜನ ಸ್ಪಂದನಾ ಸಭೆಗೆ ಬರಬೇಕಿತ್ತೆ, ಈತರ ಅರ್ಜಿಗಳನ್ನೂ ಹಲವಾರು ಬಾರಿ ಅಧಿಕಾರಿಗಳಿಗೆ ನೀಡಿದ್ದೆವೆ ಆದರೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಸಮ್ಮುಖದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳ ನಿಲ್ಯರ್ಕ್ಷ ಬಗ್ಗೆ ಗಂಬೀರವಾದ ಆರೋಪ ಮಾಡಿ ಸ್ಥಳದಲ್ಲೆ ಸಮಸ್ಯೆಗೆ ಇತ್ಯರ್ಥ ಪಡಿಸಬೇಕು ಎಂದು ಮನವಿ ತಂದಿದ್ದೆವೆ. ಆದರೆ ಸಭೆಯಲ್ಲಿ ಗೊಂದಲ ಸೃಷ್ಠಿಯಾಗಿ ನಮ್ಮ ಸುಮಾರು ವರ್ಷಗಳಿಂದ ಇರುವ ದಾರಿ ಸಮಸ್ಯೆ ಬಗ್ಗೆ ಚರ್ಚಿಸಲು ಸಾಧ್ಯವಾಗಲಿಲ್ಲ ಶಾಸಕರು ಇದರ ಬಗ್ಗೆ ಸಾರ್ವಜನಿಕವಾಗಿ ಎಷ್ಟು ವರ್ಷಗಳಿಂದ ಅಲೆಯುತ್ತಿಯಾ ಎಂದು ಕೇಳುತ್ತಾರೆ ಎಂದು ನಿರೀಕ್ಷಿಸಿದ್ದೆ ಆದರೆ ಅದು ಸಾಧ್ಯವಾಗಲಿಲ್ಲ ಮುಂದಿನ ಸಭೆಯಲ್ಲಿ ಶಾಸರನ್ನು ನೇರವಾಗಿ ಬೇಟಿಯಾಗುತ್ತೆನೆ ಎಂದು ಸಾರ್ವಜನಿಕರೊಬ್ಬರು ತಮ್ಮ ಅಳಲು ತೋಡಿಕೊಂಡ ಪ್ರಸಂಗ ನಡೆಯಿತು.

About The Author

Namma Challakere Local News
error: Content is protected !!