ದಿವಂಗತ ಕಮಲ ಹಂಪನ ಅವರ ಸ್ಮರಣಾರ್ಥಕವಾಗಿ ತಾಲೂಕು ಮಟ್ಟದ ನನ್ನ ಬದುಕು ನನ್ನ ಬವಣೆ ಕವಿಗೋಷ್ಠಿ : ಕಸಪಾ ತಾಲೂಕು ಅಧ್ಯಕ್ಷ ಜಿ ಟಿ ವೀರಭದ್ರ ಸ್ವಾಮಿ ಹೇಳಿಕೆ

ಚಳ್ಳಕೆರೆ : ದಿವಂಗತ ಕಮಲ ಹಂಪನ ಅವರ ಸ್ಮರಣಾರ್ಥಕವಾಗಿ ತಾಲೂಕು ಮಟ್ಟದ ನನ್ನ ಬದುಕು ನನ್ನ ಬವಣೆ ಎಂಬ ವಿಷಯವನ್ನು ಕುರಿತು ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಸಪಾ ತಾಲೂಕು ಅಧ್ಯಕ್ಷ ಜಿ ಟಿ ವೀರಭದ್ರ ಸ್ವಾಮಿ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪ್ರತಿಕಾ ಗೋಷ್ಠಿಯಲ್ಲಿ ಮಾತನಾಡಿದರು, ಮೂಲತಃ ಚಳ್ಳಕೆರೆಯವರು ಆದ ದಿವಂಗತ ಕಮಲ ಹಂಪನರವರ ಸ್ಮರಣಾರ್ಥವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ, ಆದ್ದರಿಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶೇಕಡಾ 95 ರಷ್ಟು ಫಲಿತಾಂಶ ಪಡೆದ ಎಸ್ ಎಸ್ ಎಲ್ ಸಿ, ಪಿ ಯು ಸಿ, ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ದಿನಾಂಕ 7 ಜುಲೈ 2024ರಂದು ಬೆಳಗ್ಗೆ 11:00ಗೆ ಗಾಯತ್ರಿ ಕಲ್ಯಾಣ ಮಂಟಪ ತ್ಯಾಗರಾಜ್ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಇನ್ನೂ ದತ್ತಿ ಉಪನ್ಯಾಸಕ ಕಾರ್ಯಕ್ರಮಗಳಿಗೆ ಹೆಸರು ನೊಂದಾಯಿಸುವರು ಕನಿಷ್ಠ 25ಸಾವಿರಗಳ ಮೊತ್ತವನ್ನು ಠೇವಣಿಗೆ ಇಟ್ಟು ಕಸಾಪದ ದತ್ತಿಗೆ ನೆರವು ನೀಡಬೇಕು,
ಈ ಕವಿಗೋಷ್ಠಿಯಲ್ಲಿ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಕವಿಗೋಷ್ಠಿಯಲ್ಲಿ ಹೆಸರು ನೋಂದಾಯಿಸಲು ಕಡೆ ದಿನಾಂಕ ಆರು ಜುಲೈ 2024 ಸಂಜೆ 5:00 ವರೆಗೆ. ಕವಿಗೋಷ್ಠಿಗೆ ಹೆಸರು ನೋಂದಾಯಿಸಿಕೊಳ್ಳುವ ಸ್ಥಳ ವಿಶ್ವಭಾರತಿ ಪ್ರೌಢಶಾಲೆ ತ್ಯಾಗರಾಜನಗರ ಚಳ್ಳಕೆರೆ ಇನ್ನು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆಗಳು, ಜಿ ಟಿ ವೀರಭದ್ರ ಸ್ವಾಮಿ-8 0 5 0 3 1 1 3 6 3 , ಚಿಕ್ಕಯ್ಯ-944 8567118, ಮಂಜುನಾಥ್-9448144373, ಜನಾರ್ಧನ್-9449581063
ಇದೇ ಸಂಧರ್ಭದಲ್ಲಿ ತಾಲೂಕು ಕಾರ್ಯದರ್ಶಿ ಸೈಯಾದ್ರಿ ಮಂಜುನಾಥ್, ತಾಲೂಕು ಘಟಕದ ಅಲ್ಪ ಸಂಖ್ಯಾತರ ವಿಭಾಗದ ಸದಸ್ಯ ಮಹಮ್ಮದ್ ಅಯಿಲ್, ಕಸಪಾ ಹೋಬಳಿ ಘಟಕ ಅಧ್ಯಕ್ಷ ಮೃತ್ಯಂಜಯ್, ನಿದೇರ್ಶಕ ಡಾ.ರಾಜಣ್ಣ, ಕೋಶ ಅಧ್ಯಕ್ಷ ಕ್ಯಾದಿಗುಂಟೆ ಜೆಜೆ.ಜಗನಾಥ್, ಚಿತ್ತಯ್ಯ ಹಾಗೂ ಇತರರು ಹಾಜರಿದ್ದರು.

About The Author

Namma Challakere Local News
error: Content is protected !!