ಚಳ್ಳಕೆರೆ : ಸಾರ್ವಜನಿಕರ ಸಮಸ್ಯೆಗಳು ಸದಾ ಹರಿಯುವ ನೀರಿನಂತೆ, ಮುಗಿದುಹೊಗುವ ಎನ್ನುವಷ್ಟರಲ್ಲಿ ಮತ್ತೊಂದು ಪ್ರಕರಣದ ಸಮಸ್ಯೆ ತಲೆದೂರುತ್ತದೆ ಆದ್ದರಿಂದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕೆಲಸ ಕಾರ್ಯಗಳನ್ನು ಚಾಚುತಪ್ಪದೆ ಪಾಲಿಸಿಕೊಂಡು ಹೋದರೆ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಹುಡುಕಬಹುದು ಎಂದರು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಜನ ಸ್ಪಂಧನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿಕೊಂಡು ಮಾತನಾಡಿದರು. ಈಗಾಗಲೇ ತಾಲೂಕಿನಲ್ಲಿ ಗ್ರಾಪಂವಾರು, ಹೋಬಳಿಯವಾರು, ತಾಲೂಕು ಮಟ್ಟದ ಜನ ಸಂಪರ್ಕ ಸಭೆಯಗಳ ಮೂಲಕ ಸಾರ್ವಜನಿಕರ ಸಮಸ್ಯೆಗೆಳಿಗೆ ಪರಿಹಾರ ನೀಡಿದ್ದೆವೆ. ಕಳೆದ ಸಭೆಯಲ್ಲಿ ಸುಮಾರು 600ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸುಮಾರು 485 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.
ನೆಪ ಮಾತ್ರದ ಜನಸಂಪರ್ಕ ಸಭೆಗಳು ಮಾಡದೆ ನೊಂದವರ ಧ್ವನಿಯಾಗಿ ಅಧಿಕಾರಿಗಳು ಕೆಲಸ ಮಾಡಬೇಕು, ಕಂದಾಯ ಇಲಾಖೆಗೆ ಹಾಗೂ ರಸ್ತೆಗೆ ಸಂಬAಧಿಸಿದAತೆ ಪಿಡ್ಲೂö್ಯಡಿ ಇಲಾಖೆ, ಕುಡಿಯುವ ನೀರಿನ ಸಮಸ್ಯೆ, ಚರಂಡಿ, ರಸ್ತೆ ಈಗೇ ಹಲವು ಮೂಲಭೂತ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಕಾಲ ಕಾಲಕ್ಕೆ ಹೊದಗಿಸುವ ಕಾರ್ಯ ಆಗಬೇಕು, ಇನ್ನೂ ಪಡಿತರ ಅಕ್ಕಿಯನ್ನು 50 ಕಾರ್ಡ್ ಇದ್ದ ಗ್ರಾಮಕ್ಕೆ ತೆರಳಿ ಸ್ಥಳದಲ್ಲೆ ಅಕ್ಕಿಯನ್ನು ವಿತರಿಸಬೇಕು, ಗ್ರಾಮೀಣ ಪ್ರದೇಶದಲ್ಲಿ ದಾರಿಗಳ ಸಮಸ್ಯೆಗಳಿಗೆ ನ್ಯಾಯಲಾದ ಮೆಟ್ಟಿಲು ಹತ್ತಿದ ಅಣ್ಣಂತಮ್ಮAದಿರು ಸಮಸ್ಯೆಗಳನ್ನು ಬಗೆಹರಿಸಬೇಕು, ಇನ್ನೂ ನಗರಸಭೆಯಲ್ಲಿ ಗಂಭೀರವಾದ ಆರೋಪವಿದೆ ಇನ್ನೂ ಸ್ವಚ್ಚತೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಮುಂದಿನ ವಾರಸಭೆ ಮಾಡಲಾಗುವುದು, ಕೃಷಿ ಇಲಾಖೆಯಲ್ಲಿ ರೈತರಿಗೆ ನೀಡುವ ಶೇಂಗಾ ಬಿತ್ತನೆ ಬೀಜ, ಮಾರುಕಟ್ಟೆ ದರಕ್ಕಿಂತ ಹೆಚ್ಚಳವಾಗಿದೆ ಈಗೀದ್ದರೆ ರೈತರಿಗೆ ಏನು ಸರಕಾರ ಯೋಜನೆ ಕೊಟ್ಟಂತೆ, ಆದ್ದರಿಂದ ರಾಜ್ಯದಲ್ಲಿ ಶೇಂಗಾ ಕಣಜ ಎಂದು ಹೆಸರು ಪಡೆದಿರುವ ಚಳ್ಳಕೆರೆಗೆ ವಿಶೇಷ ಆಧ್ಯತೆ ಮೇರೆಗೆ ಬಿತ್ತನೆ ಬೀಜಕ್ಕೆ ಸಬ್ಸಡಿ ನೀಡಬೇಕು, ಕಳೆದ ಐದು ವರ್ಷದಿಂದ ವಸತಿ ಭಾಗ್ಯ ನೀಡಿರಲಿಲ್ಲ ಆದರೆ ಪ್ರಸ್ತುತ ಸಿದ್ದರಾಮಯ್ಯರವರ ನೇತೃತ್ವದ ಸರಕಾರ ವಸತಿ ಇಲ್ಲದವರಿಗೆ ಮನೆ ನೀಡುವ ಮುನ್ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್ ಮಾತನಾಡಿ, ಜನರ ಕೈಗೆ ಏಟುಕುವಂತೆ ಸರಕಾರ ನಿಮ್ಮ ಬಳಿಗೆ ಸಮಸ್ಯೆಯನ್ನು ಇತ್ಯರ್ಥ ಪಡಿಸಲು ಸನ್ನದು ಹಾಗಿದೆ. ಆದ್ದರಿಂದ ಸಾರ್ವ ಜನಿಕರು ಸಮಸ್ಯೆ ಹೊತ್ತು ಜಿಲ್ಲಾ ಕೇಂದ್ರಕ್ಕೆ ತೆರಳುವ ಅಗತ್ಯವಿಲ್ಲ ಆದ್ದರಿಂದ ನಿಮ್ಮ ಸಮಸ್ಯೆ ಸ್ಥಳದಲ್ಲೆ ಇತ್ಯರ್ಥ ಪಡಿಸುವ ಸಲುವಾಗಿ ಈ ಜನ ಸ್ಪಂಧನ ಕಾರ್ಯಕ್ರಮ ವರದಾನವಾಗಿದೆ, ಇನ್ನೂ ಸಾರ್ವಜನಿಕರ ನಿರಂತರವಾಗಿ ಸಮಸ್ಯೆಗಳಿಗೆ ಜಿಲ್ಲಾ ಅಧಿಕಾರಿಗಳ ಕಛೇರಿಯಲ್ಲಿ ದೂರು ಪಟ್ಟಿಗೆ ಮಾಡಿದೆ ನಿಮ್ಮ ಸಮಸ್ಯೆಗಳಿದ್ದರೆ ಅರ್ಜಿ ನೀಡಬಹುದು, ನಿಮ್ಮ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂಧಿಸದಿದ್ದರೆ ದೂರು ನೀಡಿ ಶಿಸ್ತುಕ್ರಮ ಜರುಗಿಸಲಾಗುವುದು, ಒಟ್ಟಾರೆ ಸರಕಾರದ ಯೋಜನೆಗಳು ಯಶಶ್ವಿಗೆ ಕಟಿಬದ್ದವಾಗಿದೆ ಎಂದರು.
ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಮಾತನಾಡಿ, ಜನರಿಗಾಗಿ ಜನರಿಗೋಸ್ಕರ ಈ ಕಾರ್ಯಕ್ರಮ ಆಯೋಜಿಸಿದೆ, ಸರಕಾರ ಹಲವು ಯೋಜನೆಗಳನ್ನು ಜನರಿಗಾಗಿ ಮಾಡಿದೆ, ಸರಿಯಾದ ರೀತಿಯಲ್ಲಿ ಸಬ್ದಳಕೆ ಮಾಡಿಕೊಂಡು ಉಪಯೋಗ ಪಡೆಯಬಹುದು, ಕುಡಿಯುವ ನೀರು, ರಸ್ತೆ ಅಭಿವೃದ್ದಿ, ಚರಂಡಿ ಈಗೇ ಹತ್ತು ಹಲವು ಸಮಸ್ಯೆಗಳು ಇದ್ದರೆ ದೂರು ನೀಡಿ ತಕ್ಷಣವೇ ಪರಿಹಾರ ನೀಡಲಾಗುವುದು ಎಂದರು.
ಈದೇ ವೇಳೆ ಉಪವಿಭಾಗಧಿಕಾರಿ ಕಾರ್ತಿಕ್, ತಹಶೀಲ್ದಾರ್ ರೇಹಾನ್ ಪಾಷ, ಡಿವೈಎಸ್‌ಪಿ ಬಿಟಿ.ರಾಜಣ್ಣ, ಕೃಷಿ ಜಂಟಿ ನಿದೇಶಕ ಮಂಜುನಾಥ್, ತಾಪಂ. ಇಓ.ಶಶಿಧರ್, ಬಿಇಓ.ಕೆ.ಎಸ್.ಸುರೇಶ್, ನಗರಸಭೆ ಸದಸ್ಯ ಕೆ.ವೀರಭದ್ರಯ್ಯ, ರಮೇಶ್‌ಗೌಡ, ರಾಘವೇಂದ್ರ, ಮಲ್ಲಿಕಾರ್ಜುನಾ, ಪ್ರ‍್ರಕಾಶ್, ಪ್ರಶಾಂತ್, ಜಯಲಕ್ಷಿö್ಮ, ಸುಜತಾ, ಕವಿತಾ, ಸುಮಾ, ನಾಮ ನಿದೇರ್ಶನ ಸದಸ್ಯ ಪಾಪಣ್ಣ, ನೇತಾಜಿ ಪ್ರಸನ್ನ, ಸುರೇಶ್, ವೀರಭದ್ರ, ನಟರಾಜ್, ಹಾಗೂ ಎಲ್ಲಾ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.